Sunday, September 9, 2007

ಸಾಹಿತಿ- ಸಂದರ್ಶನ

ಸಮ್ಮೇಳನಗಳು ಪ್ರಸ್ತುತ ಸಮಸ್ಯೆ ಬಿಂಬಿಸುವಂತಿರಬೇಕು
- ಡಾ.ಡಿ.ಬಿ.ನಾಯಕ

ಗುಲ್ಬರ್ಗ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ.ಡಿ.ಬಿ.ನಾಯಕ ಅವರು ಬಂಡಾಯ ಧೋರಣೆಯ ಸಾಹಿತಿ. ತಮ್ಮ ವಿದ್ವತ್ ಪೂರ್ಣ ಬರಹಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರನ್ನು ಮಾಡ್ದಿದಾರೆ. ಗುಲ್ಬರ್ಗ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿ, ಅಧ್ಯಾಪಕರಾಗಿ, ಪ್ರಸಾರಂಗದ ನಿದರ್ೇಶಕರಾಗಿ, ಗುಲ್ಬರ್ಗ ವಿವಿಯ ಪ್ರಸ್ತುತ ಮೌಲ್ಯಮಾಪನ ಕುಲಸಚಿವರಾಗಿ ಸೇವೆ ಸಲ್ಲಿಸ್ದಿದಾರೆ. ಸಮ್ಮೇಳನದ ಮುನ್ನಾದಿನ ಅವರು ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.

* ಸಾಹಿತ್ಯ ಸಮ್ಮೇಳನಗಳು ಜಾತ್ರೆ ಸ್ವರೂಪ ಪಡೆಯುತ್ತಿರುವುದು ಸರಿಯೇ?
- ಉತ್ತರ: ಸಾಹಿತ್ಯ ಸಮ್ಮೇಳನಗಳು ಜಾತ್ರೆಯ ಸ್ವರೂಪವನ್ನು ಪಡೆಯಬಾರದು. ಸಮ್ಮೇಳನಗಳು ಸಮಕಾಲೀನ ಸಮಸ್ಯೆಗಳಾದ ಭಾಷಾ ಸಮಸ್ಯೆ, ಆಥರ್ಿಕ, ಸಾಮಾಜಿಕ ಬೆಳವಣಿಗೆ ಕುರಿತು ಚಿಂತನೆಯನ್ನು ಮಾಡುವಂತೆ ಇರಬೇಕು. ಸಮ್ಮೇಳನಗಳು ಅರ್ಥಪೂರ್ಣಗೊಳ್ಳಬೇಕಾದರೆ ಸಮಗ್ರ ಚಿಂತನೆ ನಡೆಯಬೇಕು. ಎಲ್ಲ ಸಾಹಿತಿಗಳ ಹೆಸರನ್ನು ಸಹೃದಯರು ಕೇಳಿರುತ್ತಾರೆ. ಆದರೆ ಅವರನ್ನು ಒಂದೆಡೆ ನೋಡುವ ಅವರ ವಿಚಾರವನ್ನು ಕೇಳುವ ಸದಾವಕಾಶ ಸಮ್ಮೇಳನದಲ್ಲಿ ಇರುತ್ತದೆ. ಅದನ್ನು ಸಾಹಿತ್ಯಾಭಿಮಾನಿಗಳು ಸದುಪಯೋಗಪಡಿಸಿಕೊಂಡರೆ ಸಮ್ಮೇಳನಕ್ಕೆ ಒಂದು ಗಂಭೀರತೆ ಬರುತ್ತದೆ. ಜಾತ್ರೆಯ ಸ್ವರೂಪ ಪಡೆದರೆ ಬರೀ ಗೌಜು, ಗ್ದದಲಗಳ ಮಧ್ಯೆ ಸಮ್ಮೇಳನ ಮುಗಿಯುತ್ತವೆ. ಆ್ದದರಿಂದ ಸಮ್ಮೇಳನ ಯಶಸ್ವಿಯಾಗಬೇಕಾದರೆ ಅದರ ಆಶಯಗಳು ಜನರನ್ನು ಮುಟ್ಟಬೇಕು.

* ಸಮ್ಮೇಳನದ ನಿರ್ಣಯಗಳು ಯಾವ ರೀತಿ ಅನುಷ್ಠಾನಗೊಳ್ಳಬೇಕು ಎಂದು ಬಯಸುತ್ತೀರಿ?
- ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿಯೂ ನಿರ್ಣಯಗಳನ್ನು ಮಂಡಿಸುತ್ತಾರೆ. ಆದರೆ ಸಮ್ಮೇಳನದ ನಿರ್ಣಯಗಳನ್ನು ಇಲ್ಲಿಯವರೆಗೆ ಚುನಾಯಿತ ಸಕರ್ಾರಗಳು ಅನುಷ್ಠಾನಗೊಳಿಸಿಲ್ಲ. ಇದು ಸಮ್ಮೇಳನ ಮತ್ತು ಸಾಹಿತಿಗಳಿಗೆ ಮಾಡುವ ಅವಮಾನ. ಸಮ್ಮೇಳನದ ನಿರ್ಣಯಗಳು ಅನುಷ್ಠಾನಗೊಳಿಸಬೇಕಾದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಬೇಕು. ಅದರಲ್ಲಿ ವಿದ್ವಾಂಸರು ಹಾಗೂ ರಾಜಕೀಯ ಮುಖಂಡರು ಇರಬೇಕು. ನಿರ್ಣಯದ ಸದಾಶಯವನ್ನು ಅನುಷ್ಠಾನಗೊಳಿಸುವಲ್ಲಿ ಸಕರ್ಾರ ಇಚ್ಚಾಶಕ್ತಿಯನ್ನು ಪ್ರದಶರ್ಿಸುವಂತೆ ಒತ್ತಡ ಹೇರಬೇಕು. ಅಂದಾಗ ಮಾತ್ರ ಸಮ್ಮೇಳನದ ನಿರ್ಣಯಕ್ಕೆ ನಿಜವಾದ ಅರ್ಥ ಬರುತ್ತದೆ. ಇಲ್ಲದೆ ಹೋದರೆ ನಿರ್ಣಯಗಳು ಕಾಗದ ಮೇಲೆ ಉಳಿದು ಸಮ್ಮೇಳನಕ್ಕೆ ಅಪಚಾರ ಬಗೆದಂತೆ ಆಗುತ್ತದೆ.

* ತಮ್ಮನ್ನು ಬಂಡಾಯ ಸಾಹಿತಿ ಎಂದು ಎಲ್ಲರು ತಮ್ಮನ್ನು ಗುರುತಿಸುತ್ತಾರೆ ನಿಮ್ಮ ಅಭಿಪ್ರಾಯವೇನು? ಹಾಗೂ ಬಂಡಾಯವಾದ ತಮ್ಮನ್ನು ಆಕಷರ್ಿಸಲು ಕಾರಣವೇನು?
- ಸಾಹಿತ್ಯ ಕೃಷಿಯಲ್ಲಿ ತೊಡಗಿದವರೆಲ್ಲರೂ ಬಂಡಾಯ ಮನೋಭಾವದವರು. ಬಂಡಾಯ ಸಾಹಿತಿ ಎಂದು ಸೀಮಿತಗೊಳಿಸುವದರಲ್ಲಿ ಅರ್ಥವಿಲ್ಲ. ಮಾನವೀಯ ಸಂಬಂಧಗಳನ್ನು ಬೆಸೆಯುವಲ್ಲಿ, ಉತ್ತಮ ಬದುಕು ಕಟ್ಟುವಲ್ಲಿ ಈ ತರದ ಮನೋಭಾವದ ಸಾಹಿತಿಗಳು ಅವಶ್ಯ. ಸಮಾಜಮುಖಿ ಸಾಹಿತಿಗಳನ್ನು ಬಂಡಾಯ ಸಾಹಿತಿ ಎಂದು ಆರೋಪಿಸಿದರೂ ಚಿಂತೆಯಿಲ್ಲ. ಒಟ್ಟು ಎರಡು ರೀತಿಯ ಸಾಹಿತ್ಯ ಪ್ರಕಾರಗಳು ಇಲ್ಲಿವೆ. ಒಂದು ವ್ಯವಸ್ಥೆಯ ಜೊತೆ ಸಾಗುವ ಸಾಹಿತ್ಯ. ಇನ್ನೊಂದು ವ್ಯವಸ್ಥೆಯ ವಿರುದ್ಧ ಸಾಗುವ ಸಾಹಿತ್ಯ, ವ್ಯವಸ್ಥೆಯ ವಿರುದ್ಧ ನಾವು ಸಾಹಿತ್ಯವನ್ನು ರಚನೆ ಮಾಡಿರುವುದಕ್ಕೆ ಬಂಡಾಯ ಸಾಹಿತಿ ಎಂದು ಗುರುತಿಸುತ್ತಾರೆ. ಇಂತಹ ಸಂವೇದನೆಗೆ ಸ್ಪೂತರ್ಿಯೆಂದರೆ ಬಸವೇಶ್ವರ, ಡಾ.ಅಂಬೇಡ್ಕರ್ ಮತ್ತು ದಲಿತ, ಶರಣ ಚಳವಳಿ ಕಾರಣವಾಗಿವೆ ಎಂದರು.

* ವಚನ ಸಾಹಿತ್ಯದ ಪ್ರಭಾವ ತಮ್ಮ ಮೇಲೆ ಬೀರಲು ಕಾರಣವೇನು?
- 12ನೇ ಶತಮಾನದಲ್ಲಿ ಬಸವೇಶ್ವರರ ನೇತೃತ್ವದ ಶರಣ ಚಳವಳಿ ಹೊಸ ಸಂವೇದನೆಗೆ, ಹೊಸ ಸಮೀಕರಣಕ್ಕೆ ಕಾರಣವಾಯಿತು. ವಿಶ್ವಕ್ಕೆ ಸಮಾನತೆ ಸಂದೇಶವನ್ನು ಸಾರಿದ ಅವರ ವಚನಗಳು ಸರ್ವಕಾಲಿಕ ಮೌಲ್ಯಗಳನ್ನು ಹೊಂದ್ದಿದವು. ಚಿಕ್ಕಂದಿನಿಂದಲೇ ಶರಣರ ಪ್ರಭಾವ ನಮ್ಮ ಮೇಲೆ ಆಯಿತು. ಆದರೆ ಇಂದು ವಚನಗಳು ಒಂದು ಜಾತಿಗೆ ಸೀಮಿತವಾಗುತ್ತಿರುವುದು ವಿಷಾದನೀಯ. ಅವುಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ತಿಳಿದುಕೊಳ್ಳುವ ಮತ್ತು ವಿಭಿನ್ನ ನೆಲೆಯಲ್ಲಿ ನಿಂತು ಯೋಚಿಸುವ ದೃಷ್ಠಿಕೋನ ಬೆಳೆಯಬೇಕಾಗಿದೆ.

* ಜಿಲ್ಲೆಯಲ್ಲಿ ಪ್ರಸ್ತುತ ಕನ್ನಡ ಸ್ಥಿತಿ?
- ಈ ಭಾಗದಲ್ಲಿ ಹೈದರಾಬಾದ ನಿಜಾಮರ ಆಡಳಿತದಿಂದ ಅಪಾರವಾದ ಉದರ್ು ಪ್ರಭಾವ ಇತ್ತು. ಅದು ಈಗ ಕಡಿಮೆಯಾಗಿದೆ. ಏಕೀರಣಗೊಂಡ ನಂತರ ಕನ್ನಡದ ಪರಿಸ್ಥಿತಿ ಸುಧಾರಣೆಯಾಗಿದೆ. ಗಡಿಭಾಗಗಳ ಅಲ್ಪವಾಗಿ ಆಭಷೆ ಸಮಸ್ಯೆಯ್ದಿದು, ಅದನ್ನು ಸಕರ್ಾರ ತನ್ನ ಇಚ್ಚಾಶಕ್ತಿಯನ್ನು ಪ್ರದರ್ಶನ ಮಾಡಿದರೆ ಸರಿಯಾಗುತ್ತದೆ. ಗಡಿಭಾಗದ ಸಾಹಿತ್ಯ ಸಮ್ಮೇಳನ, ಸಕರ್ಾರಿ ಶಾಲೆಗಳಿಗೆ ಮೂಲ ಸೌಲಭ್ಯ ಮತ್ತು ಗಡಿ ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿದರೆ ಖಂಡಿತಾ ಕನ್ನಡಕ್ಕೆ ಯಶಸ್ಸು ದೊರೆಯುತ್ತದೆ.

* ಯುವಕರಿಗೆ ತಮ್ಮ ಸಂದೇಶ?
- ಉನ್ನತ ಮೌಲ್ಯಗಳನ್ನು ಹೊಂದಿರುವ ಅನೇಕ ಸಾಹಿತಿಗಳು ಇಲ್ಲಿ ಇ್ದದಾರೆ. ಉತ್ಕೃಷ್ಟ ಸಾಹಿತ್ಯವನ್ನು ರಚಿಸ್ದಿದಾರೆ. ಆದರೆ ಅವುಗಳ ಪ್ರಚಾರ ಆಗ್ದಿದು ಕಡಿಮೆ. ಮೈಸೂರು ಭಾಗದಲ್ಲಿ ಸಾಹಿತಿಗಳು ಮಾಧ್ಯಮದ ಜೊತೆ ನಿಕಟ ಸಂಪರ್ಕವನ್ನು ಹೊಂದ್ದಿದಾರೆ. ಅಲ್ಲದೆ ಮಾಧ್ಯಮದ ಮೇಲೆ ಪ್ರಭಾವವನ್ನು ಬೀರ್ದಿದಾರೆ. ಅದರ ಕೊರತೆ ಇಲ್ಲಿ ಕಾಣುತ್ತಿದೆ. ಇದೆಲ್ಲದರ ಮಧ್ಯೆ ನಮ್ಮ ಯುವಕರು ಮಾನವೀಯತೆ ಮತ್ತು ಸೃಜನಶೀಲ ಬದುಕಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

No comments: