Sunday, September 9, 2007

ಪತ್ರಕರ್ತನಾಗಿ...

ಖಾತ್ರಿ ನೀಡದ ಉದ್ಯೋಗ ಖಾತ್ರಿ ಯೋಜನೆ

ಕೇಂದ್ರ ಸಕರ್ಾರದ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗ್ದಿದು, ಯೋಜನೆ ಅನುಷ್ಠಾನಗೊಳ್ಳುವಲ್ಲಿ ಹಲವಾರು ಅಡಚಣೆಗಳು ಎದುರಾಗಿವೆ.ಕೇಂದ್ರದ ಯುಪಿಎ ಸಕರ್ಾರದ ಮಹತ್ವಾಕಾಂಕ್ಷೆಯ ಈ ಯೋಜನೆ ಗ್ರಾಮೀಣರಿಗೆ ಉದ್ಯೋಗ ಖಾತ್ರಿ ನೀಡುತ್ತದೆಯೇ ಎಂದು ಪ್ರಶ್ನೆ ಮೂಡಿಸಿದೆ.ಕಳೆದ ಫೆಬ್ರುವರಿ ಒಂದರಿಂದ ಬೀದರ್, ಗುಲ್ಬರ್ಗ, ರಾಯಚೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ಕುಶಲತೆಯಿಲ್ಲದ ದೈಹಿಕ ಕೆಲಸ ಮಾಡಲು ಮುಂದೆ ಬರುವ ಗ್ರಾಮೀಣರಿಗೆ 100 ದಿನದ ಉದ್ಯೋಗ ನೀಡುವುದು ಇದರ ಉ್ದದೇಶ. ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನದ ಆಧಾರದ ಮೇಲೆ ಕೆಲಸ ಮಾಡಿದ ದಿನ 62.50 ರೂಪಾಯಿ ನೀಡಲಾಗುವುದು. ಉದ್ಯೋಗ ನೀಡದೆ ಇ್ದದರೆ ಶೇ. 25ರಷ್ಟು ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.ವಿವರ: ಗುಲ್ಬರ್ಗ ಜಿಲ್ಲೆಯ 337 ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆ ನಡೆಸಿ 94,974 ಜನರ ಹೆಸರನ್ನು ನೋಂದಾಯಿಸಿ ಕೊಳ್ಳಲಾಗ್ದಿದು, ಈಗಾಗಲೇ 1,73,180 ಬ್ಯಾಂಕ್ ಖಾತೆಗಳನ್ನು ತೆಗೆಯಲಾಗಿದೆ. ಸದಸ್ಯರ ಹೆಸರುಳ್ಳ ಒಟ್ಟು 70,520 ಪಾಸ್ ಬುಕ್ ಅನ್ನು ವಿತರಿಸಲಾಗ್ದಿದು, 22,932 ಅಜರ್ಿಗಳು ಬಂದಿವೆ. ಇನ್ನೂ 19,396 ಜನರಿಗೆ ಅವಕಾಶವಿದೆ. ಜಿಲ್ಲೆಯ ವಿವಿಧೆಡೆ 552 ಕಾಮಗಾರಿಗಳನ್ನು ಗುರುತಿಸಲಾಗಿದೆ.ಯಾವ ಕಾಮಗಾರಿ?: ನೂರಾರು ಕೋಟಿ ವೆಚ್ಚದಲ್ಲಿ ಕೃಷಿ ಹೊಂಡ ನಿಮರ್ಾಣ, ರಸ್ತೆ ಕಾಮಗಾರಿ, ಕೆರೆ ಹಳ್ಳಗಳು ಸ್ವಚ್ಚಗೊಳಿಸುವುದು ಸೇರಿದಂತೆ ಅನೇಕ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಕೆಲವೆಡೆ ಅದ್ಧೂರಿಯಾಗಿ ಆರಂಭವಾದರೆ, ಮತ್ತೊಂದೆಡೆ ಯೋಜನೆ ಅನುಷ್ಠಾನಕ್ಕೆ ಮೀನಮೇಷ ಎಣಿಸಲಾಗುತ್ತಿದೆ. ಗುಲ್ಬರ್ಗ ವಿಭಾಗದಲ್ಲಿ ಸತತ ಬರಗಾಲದಿಂದಾಗಿ ಕುಡಿವ ನೀರಿನ ತೀವ್ರ ತೊಂದರೆ ಉಂಟಾಗುತ್ತದೆ. ಹಾಗಾಗಿ ಈ ಯೋಜನೆ ಅಡಿಯಲ್ಲಿ ನೀರು ಸಂರಕ್ಷಣೆ, ಕೆರೆ ಹೂಳೆತ್ತುವುದು, ಅರಣ್ಯೀಕರಣಗಳಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹೇರಳವಾದ ಅವಕಾಶಗಳ್ದಿದು, ಇಂತಹ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಬರಗಾಲ ತಪ್ಪಿಸಲು ಇದೊಂದು ಒಳ್ಳೆಯ ಅವಕಾಶ ಎಂದು ಜಿಲ್ಲಾಧಿಕಾರಿ ಪಂಕಜ್ಕುಮಾರ ಪಾಂಡೆ ಹೇಳುತ್ತಾರೆ.ಯೋಜನೆ ಅನುಷ್ಠಾನಗೊಳಿಸದ ಅಧಿಕಾರಿಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಮೇಲಿಂದ ಮೇಲೆ ಎಚ್ಚರಿಕೆ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಯೋಜನೆಯಲ್ಲಿರುವ ತಾಂತ್ರಿಕ ಅಂಶಗಳ ಕುರಿತು ಕಾಮರ್ಿಕರು ವ್ಯಕ್ತಮಾಡುತ್ತಿರುವ ಅಸಮಾಧಾನ ಕಾಮಗಾರಿ ಪ್ರಗತಿಗೆ ಅಡ್ಡಿಯಾಗಿವೆ.ಜಿಲ್ಲೆಯ ಭೋಸಗಾ ಕೆರೆಯ ಹೂಳೆತ್ತುವ ಕಾರ್ಯ ಬೃಹತ್ ಕಾಮಗಾರಿ ಆಗಿದೆ. ಒಟ್ಟು 46.489 ಲಕ್ಷ ರೂಪಾಯಿ ಕಾಮಗಾರಿಗೆ ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಈ ಬೃಹತ್ ಮೊತ್ತದಲ್ಲಿ ಗಮನ ಸೆಳೆಯುವ ಕಾಮಗಾರಿ ಮಾತ್ರ ಕಂಡು ಬಂದಿಲ್ಲ.ಈ ಕೆರೆಯಲ್ಲಿನ ಹೂಳು ಅರ್ಧ ತೆಗೆದ ಮೇಲೆ ವ್ಯಾಪಕವಾದ ಮಳೆ ಸುರಿದಿದೆ. ಮತ್ತೆ ಹೂಳು ತುಂಬಿಕೊಂಡಿದೆ. ಕೆಲಸ ಮಾಡಲು ತಂದ ಬೃಹತ್ ಯಂತ್ರಗಳು ಕೆಸರಲ್ಲಿ ಸುಮ್ಮನೆ ನಿಂತಿವೆ. ಯೋಜನೆಯ ಅನುಷ್ಠಾನಕ್ಕೆ ಹಣಕಾಸಿನ ಕೊರತೆಯೇನು ಇಲ್ಲ ಎನ್ನುತ್ತಾರೆ. ಖಚರ್ು ಮಾಡಿದ ಹಣವಾದರು ಸದುಪಯೋಗವಾಗುತ್ತಿದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರು ನಿರುತ್ತರರಾಗುತ್ತಾರೆ.ಆಯ್ಕೆಯಾದ ಐದೂ ಜಿಲ್ಲೆಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಎಲ್ಲ ಕಡೆ ಅಧಿಕಾರಿಗಳು ತಯಾರಿಸಿದ ಚಂದದ ವರದಿಗಳು ಮಾತ್ರ ಈ ಹಿಂದುಳಿದ ಭಾಗದ ಭಾಗ್ಯದ ಬಾಗಿಲನ್ನೇ ತೆರೆದಿವೆ ಎನ್ನುವ ಅಭಿಪ್ರಾಯ ಮೂಡುತ್ತದೆ. ಆದರೆ ವಾಸ್ತವವಾಗಿ ಈ ಯೋಜನೆಯ ಕುರಿತು ಕೂಲಂಕುಷವಾಗಿ ನೋಡಿದರೆ ಹುಳುಕುಗಳೇ ಜಾಸ್ತಿ.ವೈಫಲ್ಯಕ್ಕೇನು ಕಾರಣ?: ಈ ಯೋಜನೆಯಡಿ ಕೆಲಸ ಮಾಡುವ ಸ್ಥಳದಲ್ಲಿ 50 ಕ್ಕಿಂತ ಹೆಚ್ಚು ಜನ ಕಾಮರ್ಿಕರ್ದಿದರೆ, ಅಲ್ಲಿ ಒಬ್ಬರು ಕಾಮರ್ಿಕರ ಮಕ್ಕಳನ್ನು ನೋಡಿಕೊಳ್ಳಬೇಕು ಎಂದು ಹೇಳುತ್ತಾರೆ. ಆದರೆ ನೋಡಿಕೊಳ್ಳುವ ಆಯಾ ಮಾತ್ರ ಎಲ್ಲಿ ಕಂಡು ಬಂದಿಲ್ಲ. ಜಿಲ್ಲೆಯ ಬಹುತೇಕ ಗ್ರಾಮಗಳ ಯುವಕರು ಉದ್ಯೋಗ ಅರಿಸಿ ಮುಂಬಯಿ, ಗೋವಾ, ಮಂಗಳೂರಿಗೆ ಹೋಗುತ್ತಾರೆ. ಮನೆಯಲ್ಲಿ ಸಣ್ಣ ಮಕ್ಕಳು 60 ವರ್ಷ ಮೇಲ್ಪಟ್ಟ ಹಿರಿಯರು ಮಾತ್ರ ಇರುತ್ತಾರೆ. ಈ ಉದ್ಯೋಗ ಖಾತ್ರಿ ನೀಡುವ 60 ರೂಪಾಯಿ ಅವರಿಗೆ ಕನಿಷ್ಠವಾದದು. ಅಲ್ಲಿ 100 ರೂಪಾಯಿಗಿಂತ ಹೆಚ್ಚು ಗಳಿಸುತ್ತಾರೆ.ಹೀಗಾಗಿ ಈ ಯೋಜನೆಯಡಿ ಕೆಲಸ ಮಾಡುವುದಕ್ಕಿಂತ ಮುಂಬೈ, ಗೋವಾಗಳಂಥ ದೊಡ್ಡ ಪಟ್ಟಣಗಳತ್ತ ಹೋಗಲು ಇಚ್ಛೆ ಪಡುತ್ತಾರೆ. ಹಾಗಾಗಿಯೇ ಇಲ್ಲಿ ಕೆಲಸಕ್ಕೆ ಬರುವ ಶೇ. 70 ರಷ್ಟು ಜನ ವಯಸ್ಸಾದವರು ಹೆಚ್ಚು ಕಾಣ ಸಿಗುತ್ತಾರೆ. ಈ ಯೋಜನೆಯಡಿ ಕೃಷಿ ಹೊಂಡ ಅಥವಾ ಪೈಪ್ಲೈನ್ ಮುಂತಾದ ಕಾಮಗಾರಿಗಳಲ್ಲಿ ದಿನಕ್ಕೆ 15 ಅಡಿ ಉ್ದದ, 3 ಅಡಿ ಅಗಲ, ಎರಡು ಅಡಿ ಆಳದ ಗುಂಡಿಯನ್ನು ತೆಗೆಯಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.ಆದರೆ ಈ ಯೋಜನೆಯಡಿ ಕೆಲಸ ಮಾಡಲು ಬರುವ ಕಾಮರ್ಿಕರು ಹೆಚ್ಚಾಗಿ ವಯಸ್ಸಾದವರಾದ ಕಾರಣ ಆ ಕಾರ್ಯವನ್ನು ಮಾಡಲು ಅಸಮರ್ಥರಾಗಿರುತ್ತಾರೆ. ಗೆರೆ ಕೊರೆದು ಇಷ್ಟೇ ಕೆಲಸ ಮಾಡಬೇಕು ಎಂದು ಕಾಮರ್ಿಕರಿಗೆ ಹೇಳಿದರೆ ಅವರು ಒಪ್ಪುವುದಿಲ್ಲ ಎನ್ನುತ್ತಾರೆ ಜಿಪಂ ಕಿರಿಯ ಎಂಜಿನಿಯರ್ ಒಬ್ಬರು. ಈಗಾಗಲೇ ಈ ಕುರಿತು ರಾಯಚೂರು ಜಿಲ್ಲೆಯಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆಯಲ್ಲದೆ, ಕಾಮಗಾರಿಯನ್ನು ಸ್ಥಗಿತಗೊಳಿಸಿದ ಉದಾಹರಣೆ ಕೂಡಾ ಇದೆ ಎನ್ನುತ್ತಾರೆ.ಅಲ್ಲದೆ ಉದ್ಯೋಗ ಖಾತ್ರಿ ಯೋಜನೆ ಅಡಿ ಹೆಸರನ್ನು ನೋಂದಾಯಿಸಿಕೊಳ್ಳಲು ಗ್ರಾಪಂ ಕಾರ್ಯದಶರ್ಿಗೆ ಹಣ ಕೊಡಬೇಕು ಎಂಬ ಆರೋಪವೂ ಇದೆ.ಈ ಎಲ್ಲ ಲೋಪ ದೋಷಗಳನ್ನು ಪರಿಹರಿಸಿ ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದಲ್ಲಿ ಯೋಜನೆ ಯಶಸ್ವಿಯಾಗುವ ಜತೆಗೆ ಈ ಭಾಗದ ಏಳಿಗೆಯೂ ಆಗುವುದರಲ್ಲಿ ಸಂಶಯವಿಲ್ಲ. ಅಧಿಕಾರಿಗಳು ಈ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಬೇಕಿದೆ.

ಲೇಖನಗಳು

ಹೆಳವರ ಬದಲಾದ ಸಾಂಸ್ಕೃತಿಕ ಬದುಕು

ಭಾರತದ ವೈವಿಧ್ಯಮಯ ಜನಾಂಗ ಮತ್ತು ವೃತ್ತಿಗಳು ಜಗತ್ತಿನ ಯಾವುದೇ ದೇಶಗಳಲ್ಲಿ ದೊರೆಯುದಿಲ್ಲ. ವಂಶಾವಳಿಗಳ ಮಾಹಿತಿಯನ್ನು ಹೇಳುತ್ತಾ ಹೊಟ್ಟೆ ಹೊರೆದುಕೊಳ್ಳುವ ಈ ಹೆಳವ ಜನಾಂಗ ಅತ್ಯಂತ ಪ್ರಾಚೀನ ಮತ್ತು ಅವರ ವೃತ್ತಿ ಕೂಡಾ ಅಷ್ಟೇ ಭಿನ್ನ.ಕನರ್ಾಟಕದಲ್ಲಿ ಸುಮಾರು ಒಂದು ಲಕ್ಷದಷ್ಟಿರುವ ಹೆಳವರು ಜಾಗತೀಕರಣ ಹಾಗೂ ಕಾಲನ ತುಳಿತಕ್ಕೆ ಸಿಕ್ಕು, ಅಳಿವಿನಂಚಿನಲ್ಲಿ ಇ್ದದಾರೆ. ನಿಶ್ಚಿತವಾಗಿ ಒಂದೆಡೆ ಇರದೆ ಊರು ಊರುಗಳನ್ನು ಸುತ್ತುತ್ತಾ ತಾವು ನಿಗದಿಪಡಿಸಿದ ಮನೆಯವರ ವಂಶಾವಳಿಯನ್ನು ಸಾರಿ. ಅವರು ನೀಡಿದ ದಾನವನ್ನು ಸ್ವೀಕರಿಸಿ ಅವರಿಗೆ ಹೊಗಳಿಕೆ ಹಾಡುಗಳನ್ನು ಹೇಳಿ ಹೋಗುತ್ತಾರೆ.``ತೂಗು ತೊಟ್ಟಿಲಾಗಲಿ, ಬೆಳ್ಳಿ ಬಟ್ಟಲಾಗಿ, ಬಂಗಾರದ ಹೊಗೆಯಾಗಿ, ಮನೆ ತುಂಬ ಮಕ್ಕಳಾಗಲಿ, ಬದುಕೆಲ್ಲ ಬೆಳಗಲಿ'' ಎಂದು ಯಾವಾಗಲೂ ಒಳ್ಳೆಯದನ್ನು ಬಯಸುವ ಹೆಳವರು. ಇಂದು ಆಥರ್ಿಕವಾಗಿ ಅತ್ಯಂತ ಹೀನ ಸ್ಥಿತಿಯಲ್ಲಿ ಇ್ದದಾರೆ. ಹೆಳವರ ಸಂಸಾರ: ಹೆಳವರ ಮೂಲ ಗುರು ಪುರಾಣದ ಕಾಲದ ಭೃಂಗಿ ಎಂದು ಹೇಳುತ್ತಾರೆ. ಆತನಿಂದ ಬಂದ ಈ ಪರಂಪರೆಯನ್ನು ಇಲ್ಲಿಯವರೆಗೂ ಮುಂದುವರಿಸಿಕೊಂಡು ಬಂದಿರುವುದಾಗಿ ಆ ಸಮಾಜದ ಹಿರಿಯರೊಬ್ಬರು ಹೇಳುತ್ತಾರೆ. ನಂತರ 12ನೇ ಶತಮಾನದಲ್ಲಿ ಭೃಂಗೇಶ ಶರಣರು ವಂಶಾವಳಿಗಳನ್ನು ಹೇಳುವ ಮೂಲಕ ವಚನಗಳನ್ನು ರಚಿಸಿ ಶರಣರ ಸಂದೇಶವನ್ನು ಮನೆ ಮನಕ್ಕೆ ಮುಟ್ಟಿಸಿದ ಅಪೂರ್ವವಾದ ಕೆಲಸ ಮಾಡಿ ಸ್ಮರಣೀಯರೆನಿಸಿಕೊಂಡ್ದಿದಾರೆ. ಇವರದೇ ಆದ ವಿಶೇಷ ಭಾಷೆ ಮೋಡಿ ಲಿಪಿ. ಇದರಲ್ಲಿ ಅವರು ಎಲ್ಲ ದಾಖಲೆಗಳನ್ನು ಸಮಗ್ರವಾಗಿ ದಾಖಲಿಸುತ್ತಾರೆ. ಇದು ತಲೆಮಾರುಗಳಿಂದ ನಡೆದುಕೊಂಡ ಬಂದ ಸಂಪ್ರದಾಯವಾಗಿದೆ. ಹೊಸ ಹೆಸರು ನಮೂದಿಸುವಾಗ ಇವರಿಗೆ ವಿಶೇಷವಾದ ಕಾಣಿಕೆಯನ್ನು ನೀಡಬೇಕಾಗುತ್ತದೆ. ಅಲ್ಲದೆ ಆ ವಂಶದ ಸಂಬಂಧಿಕರು ಎಲ್ಲಿಯೇ ಇರಲಿ ಅಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲದೆ ಹಿಂದಿನ ಕಾಲದಲ್ಲಿ ಕುಶಲವನ್ನು, ವಿವಿಧ ವಿಚಾರಗಳನ್ನು ಕೂಡಾ ಅವರು ತಿಳಿಸುತ್ತ್ದಿದರು. ಪತ್ರದಂತೆ, ಪೋನಿನಂತೆ ಕೆಲಸ ಮಾಡುತ್ತ್ದಿದರು. ವಧುವರರ ಅನ್ವೇಷನೆ ಕೂಡಾ ಮಾಡಿ ಮದುವೆಯ ಮಾಡಿಸುವ ಕಾರ್ಯವನ್ನು ಮಾಡುತ್ತ್ದಿದರು.ಬಂಡಿಗಳ ಮೂಲಕ ಊರಿಂದ ಊರಿಗೆ ಸಾಗುತ್ತಾರೆ. ಮನೆಗಳಿಂದ ಮೇವು, ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಊರ ಹೊರಗೆ ಗುಡಿಸಲು ಹಾಕಿಕೊಂಡು ಸುತ್ತಲಿನ ಭಾಗದಲ್ಲಿ ಹೊತ್ತಿಗೆಯನ್ನು ಓದಿ ಮತ್ತೆ ಬರುತ್ತಾರೆ. ಕೆಲವರು ನಂದಿಯ ಮೇಲೆ ಊರಿಂದ ಊರಿಗೆ ಹೋಗುತ್ತಾರೆ. ಇವರು ನಂದಿಯನ್ನು ತಮ್ಮ ಆರಾಧ್ಯ ದೈವ ಎಂದು ತಿಳಿಯುತ್ತಾರೆ. ಕೆಂಪು ರುಮಾಲು, ಕೋರೆ ಮೀಸೆ, ಹಣೆಯ ಮೇಲೆ ಢಾಳವಾದ ವಿಭೂತಿ, ಉ್ದದನೆಯ ಚೀಲದಲ್ಲಿ ಪುರಾತನ ಪುಸ್ತಕವನ್ನು ನೇತು ಹಾಕಿಕೊಂಡು ಬಂದರೆ ಎಲ್ಲರೂ ಆತನ ಗುರುತು ಹಿಡಿಯುತ್ತಾರೆ. ರಾತ್ರಿ ಗೌಡರ ಮನೆಯಲ್ಲಿ ವಸತಿ ಮಾಡಿದರೆ, ಕಥೆಗಳನ್ನು ಹೇಳುವ ಮೂಲಕ ರಂಜಿಸುವ ಕೆಲಸವನ್ನು ಮಾಡುತ್ತಾರೆ. ಶಿಕ್ಷಣವಿರದೇ ಇ್ದದರೂ ತಂದೆಯಿಂದ ಬಂದ ಬಳವಳಿಯಂತೆ ಮೋಡಿ ಭಾಷೆಯನ್ನು ಚೆನ್ನಾಗಿ ಬಲ್ಲವರಾಗ್ದಿದಾರೆ.ಹೆಳವರಲ್ಲಿ ಪಂಗಡ: ಹೆಳವರಲ್ಲಿ ಪ್ರಮುಖವಾಗಿ ಎರಡು ಬಣ ನಂದಿ ಹೆಳವರು, ಗರುಡ ಹೆಳವರು. ನಂದಿ ಹೆಳವರು ಎತ್ತಿನ ಮೇಲೆ ಕುಳಿತು ವಂಶಾವಳಿಯನ್ನು ಸಾರಿದರೆ, ಗರುಡ ಹೆಳವರು ಮನೆಮನೆಗೆ ತೆರಳಿ ವಂಶ, ಕುಲ, ಗೋತ್ರ, ಬೆಡಗುಗಳನ್ನು ತಿಳಿಸುತ್ತಾರೆ. ಇವರು ಒಕ್ಕಲಿಕ ವೃತ್ತಿ ಮಾಡುವ ಒಕ್ಕಲಿಗ, ರಡ್ಡಿ, ಲಿಂಗಾಯತ ಜಾತಿಯವರ ಮನೆಗೆ ಮಾತ್ರ ಹೋಗಿ ಭಿಕ್ಷೆ ಬೇಡುತ್ತಾರೆ. ಇಲ್ಲಿ ಕೂಡಾ ಶ್ರಮ ಸಂಸ್ಕೃತಿಯನ್ನು ಕಾಣಬಹುದು. ನಂತರ ಬದಲಾವಣೆಯಲ್ಲಿ ಚಾಪೆ, ಹೆಳವರು, ಕಂಬಿ ಹೆಳವರು, ಮಂಡಲ ಹೆಳವರು, ದೂದಿ ಹೆಳವರು, ತಿತ್ತಿ, ಕೂಕಣಿ, ಊರ, ಅಡವಿ, ಪುಂಗಿ, ಸಾಧು, ತಂಬೂರಿ ಹೆಳವರು ಎಂದು ಇಷ್ಟು ಅನೇಕ ಪಂಗಡಗಳಿವೆ. ಅಲ್ಲದೆ ಹಂದಿ ಹೆಳವರು ಹಂದಿಯನ್ನು ಕಾಯುತ್ತ್ದಿದು, ಮಾಂಸಾಹಾರವನ್ನು ಸೇವಿಸುತ್ತಾರೆ. ಶಿವ ಮತ್ತು ಬಸವಣ್ಣ ಇವರ ಕುಲ ದೈವವಾಗ್ದಿದು, ಅಂಗಿ, ಧೋತರ, ಕರಿ ಕೋಟು, ಕೆಂಪು ರುಮಾರು, ಹೆಗಲೆ ಮೇಲೆ ಶಲ್ಯೆ, ವಿಭೂತಿ ಅವರ ವೇಷ ಭೂಷಣವಾಗಿದೆ. ಒಳಪಂಗಡದಲ್ಲಿ ನೆಂಟಸ್ಥಿಕೆ ಮಾಡುವುದು ಕಡಿಮೆ. ಉಳಿದಂತೆ ಹಿಂದೂ ಪದ್ಧತಿಯಂತೆ ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ಬದಲಾವಣೆ: 21ನೇ ಶತಮಾನದ ಸ್ಥಿತ್ಯಂತರಗಳಲ್ಲಿ ಅನೇಕ ಸಂಸ್ಕೃತಿ ನಶಿಸಿ ಹೋದಂತೆ ಹೆಳವರು ಸಂಸ್ಕೃತಿ ಕೂಡಾ ನಶಿಸುತ್ತಾ ಸಾಗಿದೆ. ಈಗಿನ ಯುವಕರು ಈ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಲು ಬಯಸುತ್ತಿಲ್ಲ. ಕೆಲವು ಕುಟುಂಬಗಳು ವಿದ್ಯೆಗೆ ಹೆಚ್ಚು ಮಹತ್ವ ನೀಡಿದರೆ, ಕೆಲವು ಯುವಕರು ಬೇರೆ ವೃತ್ತಿ ಹಿಡಿದ್ದಿದಾರೆ. ವಂಶಾವಳಿ ಹೇಳಿಕೊಂಡು ತಿರುಗಿದರೆ, ಅರೆ ಕಾಸಿನಿಂದ ಲಾಭವಿಲ್ಲ. ಅದರ ಬದಲಿಗೆ ಒಂದೆಡೆ ನೆಲೆ ನಿಂತು, ಬದುಕು ರೂಪಿಸಿಕೊಳ್ಳುವ ಹಂಬಲ ಹೆಚ್ಚಾಗಿ ಕಾಣುತ್ತೇವೆ. ನಗರದ ಅಥವಾ ದೊಡ್ಡ ಹಳ್ಳಿಗಳಲ್ಲಿ ಮನೆ, ಜಮೀನುಗಳನ್ನು ಕೊಂಡುಕೊಂಡು ಸಂಸಾರವನ್ನು ಆರಂಭಿಸ್ದಿದಾರೆ. ಇತ್ತೀಚೆಗೆ ಹೆಳವರು ಸಂಘಟನೆಯನ್ನು ಮಾಡಿಕೊಂಡು, ಸಮಾಜಕ್ಕೆ ಗುರುಗಳನ್ನು ಕೂಡಾ ನೇಮಕಮಾಡಿಕೊಂಡ್ದಿದಾರೆ. ಅವರೆಲ್ಲರ ಮಾರ್ಗದರ್ಶನದಿಂದ ಉತ್ತಮ ಬದುಕು ರೂಪಿಸಿಕೊಳ್ಳುವ ಕನಸು ಕಾಣುತ್ತ್ದಿದಾರೆ. ಇವತ್ತು ವಂಶಾವಳಿಗಳನ್ನು ಹೇಳುವ ಹೆಳವರು ಬೆರಳೆಣಿಕೆ ಸಂಖ್ಯೆಯಲ್ಲಿ ಮಾತ್ರ ಕಾಣುತ್ತಾರೆ. ಬದಲಾದ ಸನ್ನಿವೇಶದಲ್ಲಿ ಅವರನ್ನು ಪುಸ್ತಕಗಳಿಂದ ಅರಿತುಕೊಳ್ಳುವ ಕಾಲ ದೂರ ಉಳಿದಿಲ್ಲ.



ಇಲ್ಲಿ ಬೀಜಗಳೇ ಅಕ್ಷತೆ, ಸಲಹೆಯೇ ಮಂತ್ರ

ಮಠಗಳೆಂದರೆ ಸಾಮಾನ್ಯವಾಗಿ ಸ್ವಾಮೀಜಿ, ಮಂತ್ರ, ತಂತ್ರ, ಪೂಜೆ ಪುನಸ್ಕಾರ ಗಳು ನೆನಪಿಗೆ ಬರುತ್ತವೆ. ಆದರೆ ಗುಲ್ಬರ್ಗ ಜಿಲ್ಲೆಯ ಆಳಂದ ತಾಲ್ಲೂಕಿನ ಖಜೂರಿ ಕೋರಣೇಶ್ವರ ಮಠವೇ ಬೇರೆ. ಇಲ್ಲಿ ಬೂದಿ ನೀಡುವ ಸ್ವಾಮಿಗಳಾಗಲಿ, ಮಂತ್ರ ಹೇಳುವ ಪುರೋಹಿತರಾಗಲಿ ಇಲ್ಲ.ಇದು ಕೃಷಿ ಮಠ, ರೈತರ ನೆರವಿಗೆ ಸದಾ ಧಾವಿಸುತ್ತಿರುವ ಅಪರೂಪದ ಮಠ. ವೀರಶೈವ ಪರಂಪರೆಯಲ್ಲಿ ಬರುವ ಚೌಕಿಮಠಕ್ಕೆ ಸೇರಿದ ವಿಶಿಷ್ಟ ಮಠವಿದು.ಚೌಕಿಮಠ ಎಂದರೆ ಊರ ಹೊರವಲಯದಲ್ಲಿ (ಸೀಮೆ ಮಠ ಎಂದು ಕರೆಯುವುದು ಂಟು), ಮಠ ಇರುತ್ತದೆ. ಈ ಮಠದ ಕಾರ್ಯ ರೈತರಿಗೆ ಸಲಹೆ ನೀಡುವುದು, ಬೀಜಗಳ ರಕ್ಷಣೆ, ಬಿತ್ತುವ ದಿನ ಹಾಗೂ ವಿಧಾನವನ್ನು ಮಠದ ಸ್ವಾಮೀಜಿಗಳಿಂದ ಸಲಹೆ ಪಡೆದು ಕೃಷಿ ಮಾಡುವುದು ನೂರಾರು ವರ್ಷಗಳ ಹಿಂದೆ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಇಂದು ಕೆಲವು ಸ್ಥಿತ್ಯಂತರಗಳಿಂದ ಉತ್ತರ ಕನರ್ಾಟಕದ ಪ್ರತಿಹಳ್ಳಿಗಳಲ್ಲಿ ಇ್ದದ ಚೌಕಿಮಠಗಳು ಅವಸಾನಗೊಂಡಿವೆ. ಕೆಲವು ಸಂಸಾರದ ಹಾದಿ ಹಿಡಿದು ಅಡ್ಡ ಹೆಸರನ್ನು ಮಾತ್ರ ಉಳಿಸಿಕೊಂಡಿವೆ. ಇಂತಹ ಗೊಂದಲದ ಮಧ್ಯೆಯೂ ಖಜೂರಿ ಮಠ ಒಂದು. ಸಂಸ್ಥೆ ಮಾಡುವಷ್ಟು ಕೆಲಸವನ್ನು ಮಾಡಿದೆ. ಇಂತಹ ಮಠದ ಉದಾತ್ತವಾದ ಆದರ್ಶವನ್ನು ಮತ್ತೆ ಪುನರ್ ಜೀವ ನೀಡಿದವರು ಸದ್ಯದ ಪೀಠಾಧಿಪತಿ ಮುರುಘೇಂದ್ರ ಸ್ವಾಮೀಜಿ. ಉತ್ಸಾಹಿ ತರುಣರಾದ ಸ್ವಾಮೀಜಿ ಮಠದ ಅಧಿಕಾರ ವಹಿಸಿಕೊಂಡ ಮೇಲೆ ಸ್ವಾಮೀಜಿಗಳು ಬೂದಿ ಮಾತ್ರ ನೀಡುತ್ತಾರೆ ಎಂಬ ವ್ಯಂಗ್ಯವನ್ನು ಕಿತ್ತುಹಾಕಿ, ಆಧ್ಯಾತ್ಮದ ಜೊತೆ ಕೋಟ್ಯಂತರ ಜನರ ಜೀವನಾಡಿಯಾದ ಕೃಷಿಗೆ ಮೊದಲ ಆದ್ಯತೆ ನೀಡ್ದಿದಾರೆ.ಈ ಭಾಗದ ಕೃಷಿ ತಜ್ಞರನ್ನು ಹಾಗೂ ಧಾರವಾಡ ಕೃಷಿ ವಿವಿ ಜೊತೆ ಸಂಪರ್ಕ ಸಾಧಿಸಿ ರೈತರಿಗೆ ಸಲಹೆ, ಸಮಾಲೋಚನೆ, ಸಂವಾದ, ಹೋರಾಟ ಮುಂತಾದ ಕಾರ್ಯಗಳನ್ನು ಅವಿರತವಾಗಿ ಮಾಡುತ್ತಾ ಬಂದ್ದಿದು, ಜಿಲ್ಲೆಯ ಇತರ ಮಠಗಳಿಗಿಂತ ಭಿನ್ನವಾಗಿ ನಿಲ್ಲುವಂತೆ ಮಾಡಿದೆ.ಕನರ್ಾಟಕ ರಾಜ್ಯ ರೈತ ಮಾರ್ಗದಶರ್ಿ ಕೇಂದ್ರ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಪ್ರತಿವರ್ಷ ಕೋರಣೇಶ್ವರ ಜಾತ್ರೆ ನಡೆಯುವುದನ್ನು ರೈತ ಜಾತ್ರೆ ಎಂದು ಬದಲಾಯಿಸಿ ನೂತನ ಪರಂಪರೆಯನ್ನು ಹುಟ್ಟುಹಾಕ್ದಿದಾರೆ.ಘನಮಠದಾರ್ಯರ `ಕೃಷಿಜ್ಞಾನ ಪ್ರದೀಪಿಕೆ' ಎಂಬ ಮಹಾನ್ ಕೃಷಿ ಗ್ರಂಥವನ್ನು ಮೇಲ್ಪಂಕ್ತಿಯಲ್ಲಿ ಇಟ್ಟುಕೊಂಡು ರೈತರಿಗೆ ತಿಳಿವಳಿಕೆ ನೀಡುವ ಶ್ರಮವಹಿಸಿದೆ. ಅಮಜರ್ಾ, ಮುಲ್ಲಾಮಾರಿ ನದಿ ನೀರಿನ ಬಳಕೆಯಲ್ಲಿ ಸಕರ್ಾರದ ವಿಳಂಬವನ್ನು ಪ್ರತಿಭಟಿಸಿ ಹೋರಾಟ ಮಾಡಿದೆ. ಸಮರ್ಪಕ ವಿದ್ಯುತ್ ಪೂರೈಕೆ, ಸಾಲ-ಬಡ್ಡಿ ಮನ್ನಾ, ಬೀಜ ವಿತರಣೆ ಸೇರಿದಂತೆ ಹಲವಾರು ಹೋರಾಟಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ರಾಜ್ಯಾದ್ಯಂತ ಸಂಚರಿಸಿ ಮಠಗಳು ಕೃಷಿಯ ಬಗ್ಗೆ ಒಲವು ಮೂಡಿಸುವ ಕಾರ್ಯ ಮಾಡಬೇಕು ಎಂಬುದು ಸ್ವಾಮೀಜಿ ಅವರ ಒಲವು. ಅದಕ್ಕೆ ಆಥರ್ಿಕ ಅನಾನಕೂಲತೆ ಅಡ್ಡವಾಗಬಾರದು ಎಂಬುದು ಅವರ ಅಭಿಪ್ರಾಯ. ಆದರೂ ದಾನಿಗಳ ಸಹಾಯದಿಂದ ಈ ಮಹತ್ಕಾರ್ಯವನ್ನು ಮುನ್ನೆಡಿಸಿಕೊಂಡು ಹೋಗಬೇಕು ಎನ್ನುತ್ತಾರೆ. ವರ್ಷದ ಉ್ದದಕ್ಕೂ ಬರಗಾಲವನ್ನೇ ತನ್ನ ಉಸಿರಾಗಿಸಿಕೊಂಡ ಆಳಂದ ತಾಲ್ಲೂಕು. ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿದೆ. ಇದಕ್ಕೆ ಕಾರಣ ಅಂತರ್ಜಲ ಮಟ್ಟದ ತೀವ್ರ ಕುಸಿತ. ಈ ನಿಟ್ಟಿನಲ್ಲಿ ಕೆರೆ, ಚೆಕ್ ಡ್ಯಾಂಗಳ ನಿಮರ್ಾಣ ಮಾಡುವ ಮೂಲಕ ಅಂತರ್ಜಲ ವೃದ್ಧಿ ಮಾಡುವುದು. ಇರುವ ಜಲವನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಜನರಲ್ಲಿ ಜಾಗೃತಿ ಮೂಡಿಸುವ ಉ್ದದೇಶ ಇವರಿಗೆ ಇದೆ. ಈ ಉ್ದದೇಶವನ್ನು ಈಗಾಗಲೇ ಶಾಸಕ ಬಿ.ಆರ್.ಪಾಟೀಲರ ನೇತೃತ್ವದಲ್ಲಿ ನಡೆಯುತ್ತಿದೆ. ಇಬ್ಬರ ಸಮನ್ವಯದಿಂದ ತಾಲ್ಲೂಕಿನ ಅಭಿವೃದ್ಧಿಯಾದರೆ ದೇಶಕ್ಕೆ ಮಾದರಿಯಾಗಬಹುದು.

ಸಾಹಿತಿ- ಸಂದರ್ಶನ

ಸಮ್ಮೇಳನಗಳು ಪ್ರಸ್ತುತ ಸಮಸ್ಯೆ ಬಿಂಬಿಸುವಂತಿರಬೇಕು
- ಡಾ.ಡಿ.ಬಿ.ನಾಯಕ

ಗುಲ್ಬರ್ಗ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ.ಡಿ.ಬಿ.ನಾಯಕ ಅವರು ಬಂಡಾಯ ಧೋರಣೆಯ ಸಾಹಿತಿ. ತಮ್ಮ ವಿದ್ವತ್ ಪೂರ್ಣ ಬರಹಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರನ್ನು ಮಾಡ್ದಿದಾರೆ. ಗುಲ್ಬರ್ಗ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿ, ಅಧ್ಯಾಪಕರಾಗಿ, ಪ್ರಸಾರಂಗದ ನಿದರ್ೇಶಕರಾಗಿ, ಗುಲ್ಬರ್ಗ ವಿವಿಯ ಪ್ರಸ್ತುತ ಮೌಲ್ಯಮಾಪನ ಕುಲಸಚಿವರಾಗಿ ಸೇವೆ ಸಲ್ಲಿಸ್ದಿದಾರೆ. ಸಮ್ಮೇಳನದ ಮುನ್ನಾದಿನ ಅವರು ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.

* ಸಾಹಿತ್ಯ ಸಮ್ಮೇಳನಗಳು ಜಾತ್ರೆ ಸ್ವರೂಪ ಪಡೆಯುತ್ತಿರುವುದು ಸರಿಯೇ?
- ಉತ್ತರ: ಸಾಹಿತ್ಯ ಸಮ್ಮೇಳನಗಳು ಜಾತ್ರೆಯ ಸ್ವರೂಪವನ್ನು ಪಡೆಯಬಾರದು. ಸಮ್ಮೇಳನಗಳು ಸಮಕಾಲೀನ ಸಮಸ್ಯೆಗಳಾದ ಭಾಷಾ ಸಮಸ್ಯೆ, ಆಥರ್ಿಕ, ಸಾಮಾಜಿಕ ಬೆಳವಣಿಗೆ ಕುರಿತು ಚಿಂತನೆಯನ್ನು ಮಾಡುವಂತೆ ಇರಬೇಕು. ಸಮ್ಮೇಳನಗಳು ಅರ್ಥಪೂರ್ಣಗೊಳ್ಳಬೇಕಾದರೆ ಸಮಗ್ರ ಚಿಂತನೆ ನಡೆಯಬೇಕು. ಎಲ್ಲ ಸಾಹಿತಿಗಳ ಹೆಸರನ್ನು ಸಹೃದಯರು ಕೇಳಿರುತ್ತಾರೆ. ಆದರೆ ಅವರನ್ನು ಒಂದೆಡೆ ನೋಡುವ ಅವರ ವಿಚಾರವನ್ನು ಕೇಳುವ ಸದಾವಕಾಶ ಸಮ್ಮೇಳನದಲ್ಲಿ ಇರುತ್ತದೆ. ಅದನ್ನು ಸಾಹಿತ್ಯಾಭಿಮಾನಿಗಳು ಸದುಪಯೋಗಪಡಿಸಿಕೊಂಡರೆ ಸಮ್ಮೇಳನಕ್ಕೆ ಒಂದು ಗಂಭೀರತೆ ಬರುತ್ತದೆ. ಜಾತ್ರೆಯ ಸ್ವರೂಪ ಪಡೆದರೆ ಬರೀ ಗೌಜು, ಗ್ದದಲಗಳ ಮಧ್ಯೆ ಸಮ್ಮೇಳನ ಮುಗಿಯುತ್ತವೆ. ಆ್ದದರಿಂದ ಸಮ್ಮೇಳನ ಯಶಸ್ವಿಯಾಗಬೇಕಾದರೆ ಅದರ ಆಶಯಗಳು ಜನರನ್ನು ಮುಟ್ಟಬೇಕು.

* ಸಮ್ಮೇಳನದ ನಿರ್ಣಯಗಳು ಯಾವ ರೀತಿ ಅನುಷ್ಠಾನಗೊಳ್ಳಬೇಕು ಎಂದು ಬಯಸುತ್ತೀರಿ?
- ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿಯೂ ನಿರ್ಣಯಗಳನ್ನು ಮಂಡಿಸುತ್ತಾರೆ. ಆದರೆ ಸಮ್ಮೇಳನದ ನಿರ್ಣಯಗಳನ್ನು ಇಲ್ಲಿಯವರೆಗೆ ಚುನಾಯಿತ ಸಕರ್ಾರಗಳು ಅನುಷ್ಠಾನಗೊಳಿಸಿಲ್ಲ. ಇದು ಸಮ್ಮೇಳನ ಮತ್ತು ಸಾಹಿತಿಗಳಿಗೆ ಮಾಡುವ ಅವಮಾನ. ಸಮ್ಮೇಳನದ ನಿರ್ಣಯಗಳು ಅನುಷ್ಠಾನಗೊಳಿಸಬೇಕಾದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಬೇಕು. ಅದರಲ್ಲಿ ವಿದ್ವಾಂಸರು ಹಾಗೂ ರಾಜಕೀಯ ಮುಖಂಡರು ಇರಬೇಕು. ನಿರ್ಣಯದ ಸದಾಶಯವನ್ನು ಅನುಷ್ಠಾನಗೊಳಿಸುವಲ್ಲಿ ಸಕರ್ಾರ ಇಚ್ಚಾಶಕ್ತಿಯನ್ನು ಪ್ರದಶರ್ಿಸುವಂತೆ ಒತ್ತಡ ಹೇರಬೇಕು. ಅಂದಾಗ ಮಾತ್ರ ಸಮ್ಮೇಳನದ ನಿರ್ಣಯಕ್ಕೆ ನಿಜವಾದ ಅರ್ಥ ಬರುತ್ತದೆ. ಇಲ್ಲದೆ ಹೋದರೆ ನಿರ್ಣಯಗಳು ಕಾಗದ ಮೇಲೆ ಉಳಿದು ಸಮ್ಮೇಳನಕ್ಕೆ ಅಪಚಾರ ಬಗೆದಂತೆ ಆಗುತ್ತದೆ.

* ತಮ್ಮನ್ನು ಬಂಡಾಯ ಸಾಹಿತಿ ಎಂದು ಎಲ್ಲರು ತಮ್ಮನ್ನು ಗುರುತಿಸುತ್ತಾರೆ ನಿಮ್ಮ ಅಭಿಪ್ರಾಯವೇನು? ಹಾಗೂ ಬಂಡಾಯವಾದ ತಮ್ಮನ್ನು ಆಕಷರ್ಿಸಲು ಕಾರಣವೇನು?
- ಸಾಹಿತ್ಯ ಕೃಷಿಯಲ್ಲಿ ತೊಡಗಿದವರೆಲ್ಲರೂ ಬಂಡಾಯ ಮನೋಭಾವದವರು. ಬಂಡಾಯ ಸಾಹಿತಿ ಎಂದು ಸೀಮಿತಗೊಳಿಸುವದರಲ್ಲಿ ಅರ್ಥವಿಲ್ಲ. ಮಾನವೀಯ ಸಂಬಂಧಗಳನ್ನು ಬೆಸೆಯುವಲ್ಲಿ, ಉತ್ತಮ ಬದುಕು ಕಟ್ಟುವಲ್ಲಿ ಈ ತರದ ಮನೋಭಾವದ ಸಾಹಿತಿಗಳು ಅವಶ್ಯ. ಸಮಾಜಮುಖಿ ಸಾಹಿತಿಗಳನ್ನು ಬಂಡಾಯ ಸಾಹಿತಿ ಎಂದು ಆರೋಪಿಸಿದರೂ ಚಿಂತೆಯಿಲ್ಲ. ಒಟ್ಟು ಎರಡು ರೀತಿಯ ಸಾಹಿತ್ಯ ಪ್ರಕಾರಗಳು ಇಲ್ಲಿವೆ. ಒಂದು ವ್ಯವಸ್ಥೆಯ ಜೊತೆ ಸಾಗುವ ಸಾಹಿತ್ಯ. ಇನ್ನೊಂದು ವ್ಯವಸ್ಥೆಯ ವಿರುದ್ಧ ಸಾಗುವ ಸಾಹಿತ್ಯ, ವ್ಯವಸ್ಥೆಯ ವಿರುದ್ಧ ನಾವು ಸಾಹಿತ್ಯವನ್ನು ರಚನೆ ಮಾಡಿರುವುದಕ್ಕೆ ಬಂಡಾಯ ಸಾಹಿತಿ ಎಂದು ಗುರುತಿಸುತ್ತಾರೆ. ಇಂತಹ ಸಂವೇದನೆಗೆ ಸ್ಪೂತರ್ಿಯೆಂದರೆ ಬಸವೇಶ್ವರ, ಡಾ.ಅಂಬೇಡ್ಕರ್ ಮತ್ತು ದಲಿತ, ಶರಣ ಚಳವಳಿ ಕಾರಣವಾಗಿವೆ ಎಂದರು.

* ವಚನ ಸಾಹಿತ್ಯದ ಪ್ರಭಾವ ತಮ್ಮ ಮೇಲೆ ಬೀರಲು ಕಾರಣವೇನು?
- 12ನೇ ಶತಮಾನದಲ್ಲಿ ಬಸವೇಶ್ವರರ ನೇತೃತ್ವದ ಶರಣ ಚಳವಳಿ ಹೊಸ ಸಂವೇದನೆಗೆ, ಹೊಸ ಸಮೀಕರಣಕ್ಕೆ ಕಾರಣವಾಯಿತು. ವಿಶ್ವಕ್ಕೆ ಸಮಾನತೆ ಸಂದೇಶವನ್ನು ಸಾರಿದ ಅವರ ವಚನಗಳು ಸರ್ವಕಾಲಿಕ ಮೌಲ್ಯಗಳನ್ನು ಹೊಂದ್ದಿದವು. ಚಿಕ್ಕಂದಿನಿಂದಲೇ ಶರಣರ ಪ್ರಭಾವ ನಮ್ಮ ಮೇಲೆ ಆಯಿತು. ಆದರೆ ಇಂದು ವಚನಗಳು ಒಂದು ಜಾತಿಗೆ ಸೀಮಿತವಾಗುತ್ತಿರುವುದು ವಿಷಾದನೀಯ. ಅವುಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ತಿಳಿದುಕೊಳ್ಳುವ ಮತ್ತು ವಿಭಿನ್ನ ನೆಲೆಯಲ್ಲಿ ನಿಂತು ಯೋಚಿಸುವ ದೃಷ್ಠಿಕೋನ ಬೆಳೆಯಬೇಕಾಗಿದೆ.

* ಜಿಲ್ಲೆಯಲ್ಲಿ ಪ್ರಸ್ತುತ ಕನ್ನಡ ಸ್ಥಿತಿ?
- ಈ ಭಾಗದಲ್ಲಿ ಹೈದರಾಬಾದ ನಿಜಾಮರ ಆಡಳಿತದಿಂದ ಅಪಾರವಾದ ಉದರ್ು ಪ್ರಭಾವ ಇತ್ತು. ಅದು ಈಗ ಕಡಿಮೆಯಾಗಿದೆ. ಏಕೀರಣಗೊಂಡ ನಂತರ ಕನ್ನಡದ ಪರಿಸ್ಥಿತಿ ಸುಧಾರಣೆಯಾಗಿದೆ. ಗಡಿಭಾಗಗಳ ಅಲ್ಪವಾಗಿ ಆಭಷೆ ಸಮಸ್ಯೆಯ್ದಿದು, ಅದನ್ನು ಸಕರ್ಾರ ತನ್ನ ಇಚ್ಚಾಶಕ್ತಿಯನ್ನು ಪ್ರದರ್ಶನ ಮಾಡಿದರೆ ಸರಿಯಾಗುತ್ತದೆ. ಗಡಿಭಾಗದ ಸಾಹಿತ್ಯ ಸಮ್ಮೇಳನ, ಸಕರ್ಾರಿ ಶಾಲೆಗಳಿಗೆ ಮೂಲ ಸೌಲಭ್ಯ ಮತ್ತು ಗಡಿ ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿದರೆ ಖಂಡಿತಾ ಕನ್ನಡಕ್ಕೆ ಯಶಸ್ಸು ದೊರೆಯುತ್ತದೆ.

* ಯುವಕರಿಗೆ ತಮ್ಮ ಸಂದೇಶ?
- ಉನ್ನತ ಮೌಲ್ಯಗಳನ್ನು ಹೊಂದಿರುವ ಅನೇಕ ಸಾಹಿತಿಗಳು ಇಲ್ಲಿ ಇ್ದದಾರೆ. ಉತ್ಕೃಷ್ಟ ಸಾಹಿತ್ಯವನ್ನು ರಚಿಸ್ದಿದಾರೆ. ಆದರೆ ಅವುಗಳ ಪ್ರಚಾರ ಆಗ್ದಿದು ಕಡಿಮೆ. ಮೈಸೂರು ಭಾಗದಲ್ಲಿ ಸಾಹಿತಿಗಳು ಮಾಧ್ಯಮದ ಜೊತೆ ನಿಕಟ ಸಂಪರ್ಕವನ್ನು ಹೊಂದ್ದಿದಾರೆ. ಅಲ್ಲದೆ ಮಾಧ್ಯಮದ ಮೇಲೆ ಪ್ರಭಾವವನ್ನು ಬೀರ್ದಿದಾರೆ. ಅದರ ಕೊರತೆ ಇಲ್ಲಿ ಕಾಣುತ್ತಿದೆ. ಇದೆಲ್ಲದರ ಮಧ್ಯೆ ನಮ್ಮ ಯುವಕರು ಮಾನವೀಯತೆ ಮತ್ತು ಸೃಜನಶೀಲ ಬದುಕಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕವನ

ನಿಲ್ಲಿ ಮೋಡಗಳೆ

ನಿಲ್ಲಿ ಮೋಡಗಳೆ
ಕಾದ ನೆಲಕೆ ಹನಿಯ
ನೀರು ಸುರಿಸಿಬೆಚ್ಚಾಗಾದ ನನ್ನ
ಎದೆಯ ತಂಪುಗೊಳಿಸಿನಿಲ್ಲಿ ಮೋಡಗಳೇ...
ಎಲ್ಲಿ ಓಡುವಿರಿ?
ದಿಬ್ಬಣಕ್ಕೆ ಸಾಗುವ ಉತ್ಸಾಹದಲ್ಲಿ
ಮರೆಯದಿರು ಈ ಧರೆಯ ಎಂದೆಂದಿಗೂ
ನಿಂತು ಹನಿ ಹನಿಸಬಾರದೇಕೆ
ಸೂರ್ಯನ ಭಯವೇ ವರುಣದೇವ
ನಿನಗೆಸೂರ್ಯನ ಉಗ್ರಪ್ರತಾಪಕೆ ಮಟ್ಟ
ಹಾಕಿಅಲ್ಪವಾದರೂ ತಂಪಿನ ಕಂಪು ಸುರಿಸಬಾರದೇ
ಸೂರ್ಯನೆಂದರೆ ಈ ನಾಡಿಗೆ ಅಚ್ಚುಮೆಚ್ಚು
ಛಾಯಾದೇವಿಯನೆನಪಿನ ಕಿಚ್ಚಿನಲ್ಲಿ
ಸದಾ ಸುರಿಸುವ ಬೆಂಕಿಉಂಡೆಗೆ,
ವರುಣದೇವ ಮಳೆಯ ಸಿಂಚನ ಗೈಯಬಾರದೇಕೆ


ಜಂಜಾಟ
ಜಗವೆಲ್ಲ ಮಲಗಿರಲು ಅವನೊಬ್ಬ ಎ್ದದಲೋಕದ
ಜಂಜಾಟದಲಿ ಬ್ದಿದವರನು ಕೈ ಹಿಡಿದು
ಎತ್ತಿ ಬೆಳಕಿನೆಡೆಗೆ ತಂದಮೋಕ್ಷ ಮಾರ್ಗದಲಿ,
ಶಾಂತಿಯ ತೋಟದಡಿ ನಿಂತ
ಸಿದ್ಧ ಬುದ್ಧನಾದದು ರೋಚಕಅಂತೆಯೇ
ಜಗತ್ತಿಗೆ ಎಲ್ಲ ಸೋಜಿಗರೋಗ ರುಜಿನಗಳ,
ದಾಸ್ಯದ ಶೃಂಖಲೆಯ ಕೊಂಡಿ ಕಳಚಿಕಂಡುಕೊಂಡ
ಸತ್ಯದ ಶಾಶ್ವತವಾದ ಬದುಕಿಗೆ ಉತ್ತರವನು.
ಊಟವಿಲ್ಲದೆ ಮಾಡಿದ ತಪಸ್ಸಿನಿಂದ ಸಿಕ್ಕಿತೇ
ಸಿದ್ಧಿ?ಮೂಳೆ ಮಾಂಸ ಚಕ್ಕಳವಾದವೇ ಹೊರತು
ಮತ್ತೇನೂ ಅಲ್ಲ.ರಮ್ಯ, ರೌದ್ರ ಪ್ರಕೃತಿಯ ಮಡಿಲಿನಲ್ಲಿ
ಮಲಗಿಆನಂದಿಸಿ ಅನುಭವಿಸಿ ಮಾಡಿದ ತಪ್ಪಸ್ಸೇ
ಜ್ಞಾನೋದಯಅದೇ ಬುದ್ಧ ಪೂಣರ್ಿಮಾ

ಆತ ಅರ್ಥವಾಗಲೇ ಇಲ್ಲ....

ರೋಶಾವೇಷದಿಂದ ಹೇಳ್ದಿದೇ ಕೊನೆನನಗೆ ಎಂದು
ಮುಖ ತೋರಿಸಬೇಡೆಂದುತೋರಿಸಬಾರದ
ಮುಖ ಮುಚ್ಚಿಕೊಂಡು ಕುಳಿತರೂಸ್ಮೃತಿಪಟಲದಲ್ಲಿ
ಅಚ್ಚೊತ್ತಿದಂತಹ ಮುದ್ರೆ
ಕಪ್ಪು,ಒರಟು, ನಯನಾಜೂಕಿಲ್ಲ, ಚಂದದ ಮಾತು
ಇಲ್ಲಆದರೆ ಚೆಲುವ, ಹೃದಯಯುಳ್ಳವ ತನ್ನ ಮಾತೇ
ಕೊನೆಹಾಗೆಂದರೆ ಹೇಗೆ ಎಂದು ಪ್ರಶ್ನಿಸಿದರೆನೇ
ಜಗಳಸಮರಸವೇ ಜೀವನವಲ್ಲವೇ ಎಂದರೆ ಮೌನ
ನಿತ್ಯ ಸ್ವಲ್ಪ ಜಗಳ, ಅವನನ್ನು ಕಂಡರೆ ನನಗೆ
ಭಯಆದರೆ ಆಳದಲ್ಲಿಯೆಲ್ಲ ಪ್ರೀತಿಯ ಬುಗ್ಗೆ,
ಹೇಳಲು ಆಗದ ಚಡಪಡಿಕೆಅವನಿಗೂ ಅದೇ
ಎನ್ನುವ ಭಾವ ನನ್ನದುಯಾರಿಗೆ ಗೊತ್ತು,
ಗೊತ್ತುಗುರಿಯಿಲ್ಲ ಹುಚ್ಚು ಮನಸಿಗೆ
ಹೀಗೆ ಅವನು ಕಡೆಗೂ ನನಗೆ ಅರ್ಥವಾಗಲಿಲ್ಲ
ಮೊನ್ನೆ ರಸ್ತೆಯಲ್ಲಿ ಸಿಕ್ಕಾಗ ಕೃಶವಾದ
ಶರೀರ ಕಪ್ಪುಮುಖದ ಮೇಲೆಕಪ್ಪುಕಲೆ,
ಹೊಟ್ಟೆ ತೊಳೆಸಿದಂತಾಯಿತು,
ಮಾತು ಇಲ್ಲಅದೇ ಒರಟು ಒಂದು ಕ್ಷಣ
ಬೇಸರವಾಯಿತೆನಿಸಿ
ನಾನೇ ಅಂದೆ ನನಗೆ ಎಂದೂ ಸಿಗಬೇಡ!

ನಾರಿ ಸಾಧನೆ

ಕಲ್ಲನ್ನು ಹೂವಾಗಿಸುವ ಕನಕಾ

ಮಹಿಳೆಯರು ಇಂದು ವಿಮಾನಯಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪುರಷರ ಸರಿಸಮವಾಗಿ ತೊಡಗಿಸಿಕೊಂಡ್ದಿದಾರೆ. ಆದರೆ ಶಿಲ್ಪಕಲೆಯಲ್ಲಿ ಕೃಷಿ ಮಾಡಿ ಅದರಲ್ಲಿಯೇ ಪ್ರಸಿದ್ಧಿ ಪಡೆದ ಕೆಲವೇ ಕೆಲವು ಮಹಿಳಾ ಕಲಾವಿದರಲ್ಲಿ ಕನಕಾ ಮೂತರ್ಿ ಕೂಡಾ ಒಬ್ಬರು.ಟಿ. ನರಸೀಪುರದ ಸಾಂಪ್ರದಾಯಿಕ ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಕನಕಾ ಕೈಯಲ್ಲಿ ಉಳಿ ಹಿಡಿಯುತ್ತೇನೆ ಎಂದಾಗ ಮನೆಯಲ್ಲಿ ವಿರೋಧಿಸದೆ ಅಚ್ಚರಿ ವ್ಯಕ್ತಪಡಿಸಿದರು. ಶಿಲ್ಪಕಲೆಯನ್ನು ಕಲಿಸುವ ಗುರುಗಳಾದರೂ ಎಲ್ಲಿ ಸಿಗುತ್ತಾರೆ ಎಂದು ಮನೆಯವರೇ ಪ್ರಶ್ನಿಸಿದರು. ಶಿಲ್ಪಕಲೆ ಕಲ್ಲಿನಷ್ಟೆ ಜಟಿಲ. ಪುರುಷ ಪ್ರಧಾನ ಮತ್ತು ಅದರಲ್ಲಿಯೂ ಸಾಂಪ್ರಾದಾಯಿಕ ಶಿಲ್ಪಕಲಾಕಾರ ವರ್ಗದವರು ಪ್ರೋತ್ಸಾಹ ನೀಡುವರೆ ಎಂದು ಸಂಶಯ ವ್ಯಕ್ತಪಡಿಸಿದರು.ಆದರೂ ಪ್ರಯತ್ನಿಸಿ ಮೊದಲು ಚಿತ್ರಕಲೆ, ನಂತರ ಕಲ್ಲನ್ನು ಹಿಡಿದು ಮೂರ್ತರೂಪತೆಯನ್ನು ತರಲು ಅಪಾರವಾಗಿ ಕನಕಾ ಶ್ರಮಿಸಿದರು.ಆಕೆಯಲ್ಲಿರುವ ಕಲೆ, ತಾದಾತ್ಮತೆಯನ್ನು ಗುರುತಿಸಿದ ಶಿಲ್ಪಿ ವಾದಿರಾಜ ಕಲೆಗೆ ಗುರುಗಳಾಗಲು ಸಮ್ಮಿತಿಸ್ದಿದು ದೊಡ್ಡ ಭಾಗ್ಯ ಎನ್ನುತ್ತಾರೆ. ಅನಂತರ ಸುಮಾರು ನಾಲ್ಕು ದಶಕಗಳ ಕಾಲ ಉಳಿ, ಸುತ್ತಿಗೆ ಹಿಡಿದುಕೊಂಡು ಈ ಕ್ಷೇತ್ರದಲ್ಲಿ ಸಾಧನೆ ಮಾಡಿ ಎತ್ತರಕ್ಕೆ ಕನಕಾ ನಿಂತ್ದಿದಾರೆ. ಅದರ ಹಿಂದೆ ಅವರ ಶ್ರಮ, ಅನುಭವಿಸಿದ ನೋವು ಎಲ್ಲವನ್ನು ಸುಮಾರು 10 ತಾಸುಗಳ ತಮ್ಮ ನಿರಂತರ ಕೆಲಸದಿಂದ ಮರೆಯಲು ಶ್ರಮಿಸುತ್ತಾರೆ. `ನನ್ನ ಆಸಕ್ತಿ ಪತಿಗೆ ಗೊತ್ತಿರದ್ದಿದರೂ ಮದುವೆ ಆದ ಮೇಲೆ ತುಂಬಾ ಪ್ರೋತ್ಸಾಹ ನೀಡಿದರು. ಮನೆಯಲ್ಲಿಯೇ ಸ್ಟುಡಿಯೊ ನಿಮರ್ಿಸುವಲ್ಲಿ ಕೂಡಾ ಅವರ ಸಹಕಾರ ಇದೆ' ಎನ್ನುತ್ತಾರೆ. ಸಾಂಪ್ರದಾಯಿಕ ಶಿಲ್ಪ, ವ್ಯಕ್ತಿ ಚಿತ್ರಗಳು ಮತ್ತು ನೂತನ ಕಲಾಮಾಧ್ಯಮದಲ್ಲಿ ಕೆಲಸ ಮಾಡ್ದಿದಾರೆ. ಹೆಚ್ಚಾಗಿ ಅವರು ಸಾಂಪ್ರದಾಯಿಕ ಶಿಲ್ಪಕಲೆಗಳನ್ನೇ ಕಡೆದ್ದಿದಾರೆ. ಶಿವ, ಗಣೇಶ, ದುಗರ್ೆ, ಕೃಷ್ಣಾ, ರಾಧೆ, ಬುದ್ಧ ಮುಂತಾದ ಶಿಲ್ಪಗಳು ಇಂದು ಅನೇಕ ದೇವಸ್ಥಾನಗಳಲ್ಲಿ ಪೂಜಿಸಲ್ಪಡುತ್ತವೆ. ವಿಶ್ವೇಶ್ವರಯ್ಯನವರ ಮೂತರ್ಿಯನ್ನು ಬೆಂಗಳೂರು ಎಂಜಿನಿಯರ್ಸ್ ಸಂಸ್ಥೆಯಲ್ಲಿ ಇಟ್ಟ್ದಿದಾರೆ. ಗಣೇಶನ ಮೂತರ್ಿಯನ್ನು ಸತ್ಯಸಾಯಿ ಆಶ್ರಮದಲ್ಲಿ ಪೂಜೆಗೆ ಇಟ್ಟ್ದಿದಾರೆ ಎನ್ನುತ್ತಾರೆ. ಯೂರೋಪ್ ಖಂಡದಲ್ಲಿ ಎಲ್ಲೆಡೆ ಸುತ್ತಿ ತಮ್ಮ ಕಲಾಪ್ರದರ್ಶನ ನಡೆಸ್ದಿದಾರೆ. ಕುವೆಂಪು, ಗಂಗೂಬಾಯಿ ಹಾನಗಲ್, ರಾಜಾರಾಮಣ್ಣ ಸೇರಿದಂತೆ ಅನೇಕರ ವ್ಯಕ್ತಿಚಿತ್ರಗಳನ್ನು ನಿಮರ್ಿಸಿ ಗಮನ ಸೆಳೆದ್ದಿದಾರೆ. ಶಿಲ್ಪಕಲಾ ಅಕಾಡೆಮಿ ಆಯೋಜಿಸಿದ ಶಿಬಿರಗಳ ನಿದರ್ೇಶಕರಾಗಿ ದುಡಿದ್ದಿದಾರೆ. ಅಕಾಡೆಮಿ ಸದಸ್ಯರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವ ಅವರಿಗೆ ಇದೆ. ಯಾವುದೇ ಸಂದರ್ಭದಲ್ಲಾದರೂ ತನ್ನನ್ನು ಮಹಿಳೆ ಎಂದು ಪರಿಗಣಿಸಬಾರದು. ಅದು ನನ್ನ ಪ್ರತಿಭೆಗೆ ಅರ್ಹತೆ ಆಗಬಾರದು ಎಂದು ಖಡಾಖಂಡಿತವಾಗಿ ಅವರು ಹೇಳುತ್ತಾರೆ. ಆ ಮೀಸಲಾತಿಯಿಂದ ನನ್ನ ಶ್ರಮಕ್ಕೆ ಕುಂದು ಬರುತ್ತದೆ ಎನ್ನಲು ಅವರು ಮರೆಯುವುದಿಲ್ಲ. ಪುರುಷರು ಮಾಡುವಷ್ಟೇ ಈ ಕೆಲಸವನ್ನು ಶ್ರದ್ಧೆಯಿಂದ ಮಾಡ್ದಿದೇನೆ. ಯಾವುದೆ ಒಂದು ಕಲ್ಲು ನನ್ನ ಕೈಗೆ ಬಂದರೆ ಅದರಲ್ಲಿ ಭಾವನೆಯನ್ನು, ವಾಸ್ತವವನ್ನು ತುಂಬಲು ತುಂಬಾ ಶ್ರಮಿಸುತ್ತೇನೆ. ಕಲ್ಲು ಕಲೆ ಆಗುವವರೆಗೂ ಅದನ್ನು ನಾನು ಬಿಡುವುದಿಲ್ಲ ಎಂದು ತಮ್ಮ ಕೆಲಸದ ಬಗ್ಗೆ ಇರುವ ಪ್ರೀತಿಯನ್ನು ಕೃತಿಗಳಲ್ಲಿಯೂ ತೋರಿಸ್ದಿದಾರೆ. ಇಂದು ಹೊಸ ಪೀಳಿಗೆಯ ಶಿಲ್ಪಕಲಾವಿದರ ಬಗ್ಗೆ ಸ್ವಲ್ಪ ಕೋಪ ಅವರಲ್ಲಿ ಇದೆ. ತಿಳಿದುಕೊಳ್ಳಬೇಕೆಂಬ ಉತ್ಸಾಹ ಕಡಿಮೆ. ಈ ಮಹಿಳೆಯೇನು ಹೇಳುತ್ತಾಳೆ ಅವರಿಂದ ಕಲಿಯುದೇನು ಎಂಬ ಭಾವನೆ ಕೆಲವರಲ್ಲಿ ಇದೆ. ಅದರಲ್ಲೂ ಒಂದು ಮೂತರ್ಿಯನ್ನು ಮಾಡುವ ಮುಂದೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಅದನ್ನು ಚಿತ್ರದ ಮೂಲಕ ಬಿಡಿಸಿ ಆ ರೀತಿ ಕಡೆಯಬೇಕು ಆ ರೀತಿಯ ಅಭ್ಯಾಸವೇ ಈಗಿನವರಿಗೆ ಇಲ್ಲ ಎಂದು ವಿಷಾದಿಸುತ್ತಾರೆ. ಅನೇಕ ತೊಂದರೆಗಳ ಮಧ್ಯೆಯೂ ಇಂದು ಕನಕಾ ಮೂತರ್ಿ ಪ್ರಸಿದ್ಧ ಪಡೆದ ಶಿಲ್ಪಕಲಾವಿದೆ. ಜನರಿಗೆ ಅರ್ಥವಾಗುವಂತಹ ಹಾಗೂ ಸಾಂಪ್ರದಾಯಿಕ ಕಲೆಯನ್ನು ಅವರು ಹೆಚ್ಚು ಇಷ್ಟ ಪಡುತ್ತಾರಲ್ಲದೆ, ಆ ಕುರಿತು ತಮ್ಮ ಶಿಷ್ಯರಿಗೆ ಮಾರ್ಗದರ್ಶನ ಕೂಡಾ ನೀಡುತ್ತ್ದಿದಾರೆ. ಅವರ ಶಿಷ್ಯರಲ್ಲಿ ಮಹಿಳೆಯರು ಇಲ್ಲದೆ ಇರುವುದು ಅವರಿಗೆ ಬೇಸರ ತಂದಿದೆ. ಆದರೂ ಶಿಷ್ಯತ್ವ ಅರಿಸಿ ಬಂದರಿಗೆ ಅವರಿಗೆ ಕಲೆಯನ್ನು ಕೂಡಾ ಧಾರೆ ಎರೆಯಲು ಸಿದ್ಧರಾಗ್ದಿದಾರೆ. ಒಬ್ಬಳೇ ಮಗಳು ಸುಮತಿ ಹಿಂದೂಸ್ತಾನಿ ಕಲಾವಿದೆ. ಅನೇಕ ಕಡೆ ಕಾರ್ಯಕ್ರಮಗಳನ್ನು ನೀಡ್ದಿದಾಳೆ. ಒಳ್ಳೆಯ ಹೆಸರು ಭವಿಷ್ಯ ಇದೆ ಎಂದು ಸಂತೃಪ್ತ ವ್ಯಕ್ತಪಡಿಸುತ್ತಾರೆ.

ಮಹಿಳಾ ಸಂವೇದನೆಗೆ ಗಟ್ಟಿ ನೆಲೆ ಒದಗಿಸಿದ `ಗುಲ್ಬರ್ಗ ಮಹಿಳೆಯರು'
ಭಾರತದ ಹೆಣ್ಣು ಕುಟುಂಬದ ಗೌರವವೆಂದು ಗೌರವಿಸಲ್ಪಡುವಾಗ ಆಕೆಯ ನೋವು, ಹತಾಶೆ, ಹೋರಾಟಗಳು ಕೂಡಾ ಕುಟುಂಬ ಗೌರವದ ಅತ್ಯಂತ ಗೌಪ್ಯತೆಯ ವಿಚಾರವೆಂದೆ ಪರಿಗಣಿಸಲ್ಪಡುತ್ತದೆ. ಅವುಗಳ ಅಭಿವ್ಯಕ್ತಿ ಅಕ್ಷಮ್ಯ ಅಪರಾಧ ಕೂಡಾ, ಇದಕ್ಕೆ ತದ್ವಿರುದ್ಧವಾದ ಒಂದು ನಿಲುವುವನ್ನು ಇಲ್ಲಿಯ ಮಹಿಳಾ ಹೋರಾಟಗಾರರು ಅನುಸರಿಸಿಕೊಂಡು ಬಂದ್ದಿದು ಮಾತ್ರ ಸುಳ್ಳಲ್ಲ.
ವರದಕ್ಷಿಣೆ ಸಾವೇ ಇರಲಿ, ಗಂಡನ ಕಿರುಕುಳವೇ ಇರಲಿ, ದಲಿತ ಮಹಿಳೆಗೆ ಆದ ಅವಮಾನವೇ ಇರಲಿ ಅದನ್ನು ದೊಡ್ಡಮಟ್ಟದ ಹೋರಾಟಗಳನ್ನು ರೂಪಿಸಿ ಹೊರಜಗತ್ತಿನ ಗಮನ ಸೆಳೆದ್ದಿದಾರೆ.
ಅನಕ್ಷರತೆ, ನಿರುದ್ಯೋಗ, ಬರಗಾಲ, ಅನಿಷ್ಟ ಸಂಪ್ರದಾಯ, ಮೂಢನಂಬಿಕೆ ಮುಂತಾದ ಸಾಮಾಜಿಕ ಅನಿಷ್ಟತೆಯೇ ಹಾಸುಹೊಕ್ಕಾಗಿರುವ ಗುಲ್ಬರ್ಗ ಜಿಲ್ಲೆ ಎಲ್ಲ ರಂಗದಲ್ಲಿ ಹಿಂದುಳಿದಿದೆ ಎಂಬ ಮಾತನ್ನು ಅನೇಕ ಬಾರಿ ಕೇಳ್ದಿದೇವೆ. ಆದರೆ ಇಲ್ಲಿಯೇ ಇ್ದದು ಮಹಿಳೆಯರ ಜಾಗೃತಿ ಮೂಡಿಸುತ್ತಿರುವ ಮಹಿಳಾ ಹೋರಾಟಗಾರರ ಬಗ್ಗೆ ನಾವು ಕೇಳಲೇಬೇಕು.
ಆತ್ಮಹತ್ಯೆ, ಅಪಹರಣ, ಅತ್ಯಾಚಾರ, ಭ್ರೂಣಹತ್ಯೆ, ಕೌಟುಂಬಿಕೆ ಸಮಸ್ಯೆ ಮುಂತಾದ ಸಮಸ್ಯೆಗಳ ವಿರುದ್ಧ ಅವಿರತ ಹೋರಾಟವನ್ನು ಸಾಹಿತ್ಯದ ಸೇವೆ ಮಾಡುತ್ತಲೇ ಮಹಿಳೆಯರಿಗೆ ಧ್ವನಿ ಆದ ಸಾಹಿತಿ ಗೀತಾ ನಾಗಭೂಷಣ, ಸಮಾಜ ಸೇವೆಯ ಇಂದಿರಾ ಮಾನ್ವಿಕರ್, ಮಹಿಳಾ ಜಾಗೃತಿಯ ಕೆ. ನೀಲಾ ಮಂಚೂಣಿಯಲ್ಲಿ ನಿಲ್ಲುತ್ತಾರೆ.
ತಮ್ಮ ಸೇವೆಯಿಂದಲೇ ರಾಜ್ಯಾದಾದ್ಯಂತ ಮನೆ ಮಾತಾದ ಈ ಹೋರಾಟಗಾತರ್ಿಯರು ತಮ್ಮದೇ ಕ್ಷೇತ್ರಗಳಲ್ಲಿ ಇ್ದದುಕೊಂಡು ಮಹಿಳೆಯರಿಗೆ ಸಮರ್ಥ ಧ್ವನಿ ಒದಗಿಸ್ದಿದಾರೆ.
ಗೀತಾ ನಾಗಭೂಷಣ ಅವರು ದಲಿತ ಹಿನ್ನಲೆಯಿಂದ ಬಂದ ಲೇಖಕಿ. ದಲಿತರ ನೋವು, ನಲಿವು ಮುಂತಾದವುಗಳನ್ನು ಸಮಗ್ರವಾಗಿ ತಮ್ಮ ಸಾಹಿತ್ಯದಲ್ಲಿ ಮೂಡಿಸ್ದಿದಾರಲ್ಲದೆ, ಹಿಂದುಳಿದ ಮಹಿಳೆಯರು ಮುಂದೆ ಬರಬೇಕಾದರೆ ಶಿಕ್ಷಣ ಅತ್ಯಂತ ಅವಶ್ಯವಾದ್ದದು. ಅಂತಹ ಉನ್ನತ ಶಿಕ್ಷಣವನ್ನು ನಾವು ಪಡೆದರೆ ಈ ಎಲ್ಲ ಶೋಷನೆಗಳಿಂದ ಮುಕ್ತಾವಾಗುತ್ತೇವೆ ಎಂದು ಅವರು ತಮ್ಮದೆ ಉದಾಹರಣೆ ನೀಡುತ್ತಾರೆ. ಹೈಕ ಭಾಗದ ಯಾವುದೆ ಶಾಲೆ ಕಾಲೇಜುಗಳು ಸಮಾರಂಭಕ್ಕೆ ಕರೆದರೆ ಅವರು ಅತ್ಯಂತ ಖುಷಿಯಿಂದ ಭಾಗವಹಿಸಿ ಮಹಿಳೆಯರ ಶಿಕ್ಷಣದ ಬಗ್ಗೆಯೇ ಒತ್ತಿ ಹೇಳುತ್ತಾರೆ. ಅಲ್ಲದೆ ತಮ್ಮ ಕಾದಂಬರಿಗಳ ಮೂಲಕ ಮಹಿಳೆಗೆ ಉನ್ನತ ಸ್ಥಾನವನ್ನು ನೀಡುತ್ತಾರೆ.ಆಳಂದ ತಾಲ್ಲೂಕಿನ ಚಿಂಚನಸೂರಿನಲ್ಲಿ ಇರುವ ಆರಾಧ್ಯದೇವಿ `ಮಹಾಪೂರತಾಯಿಗೆ' ಬಿಡುವ ದೇವದಾಸಿ ಪದ್ಧತಿ ವಿರುದ್ಧ ಉಗ್ರ ಧ್ವನಿಯನ್ನು ಎತ್ತಿ `ಮಹಾಪೂರತಾಯಿ ಮಕ್ಕಳು' ಎಂಬ ಕಾದಂಬರಿಯನ್ನು ಬರೆದು ದೇವದಾಸಿಯರಲ್ಲಿ ಜಾಗೃತಿಯನ್ನು ಮೂಡಿಸ್ದಿದಾರೆ. ಪರಿಣಾಮವಾಗಿ ಈ ಅನಿಷ್ಟ ಪದ್ಧತಿ ಇಂದು ಸಂಪೂರ್ಣವಾಗಿ ನಿಂತು ಹೋಗಿದೆ.
ಅದೇ ರೀತಿ ಸಂಗಮೇಶ್ವರ ಮಹಿಳಾ ಮಂಡಳ ಸ್ಥಾಪಿಸುವುದರ ಮೂಲಕ ಗುಲ್ಬರ್ಗ ಜಿಲ್ಲೆಯಲ್ಲಿಯೇ ಒಂದು ಹೊಸಶಕೆಯನ್ನು ಆರಂಭಿಸಿದವರು ಇಂದಿರಾ ಮಾನ್ವಿಕರ, ಶ್ರೀಮಂತ ಕುಟುಂಬದಲ್ಲಿ ಜನಿಸಿ ಮಹಿಳಾ ಮಂಡಳದ ಸ್ಥಾಪನೆಯ ಮೂಲಕ ಹಗಲಿರುಳು ಮಹಿಳಾಭಿವೃದ್ಧಿಗೆ ಶ್ರಮಿಸ್ದಿದಾರೆ. `ಗುಲ್ಬರ್ಗ ಅಮ್ಮ' ಎಂದೇ ಖ್ಯಾತರಾದ ಮಾನ್ವಿಕರ ತಮ್ಮ ಸೇವೆಯಿಂದ ಸಮಸ್ತ ಮಹಿಳೆಯರ ಮನಸ್ಸನ್ನೇ ಗ್ದೆದ್ದಿದಾರೆ. ಮಹಿಳಾ ಸಹಾಯವಾಣಿ, ಸಾಂತ್ವಾನ ಕೇಂದ್ರ, ಅನಾಥ ಮಕ್ಕಳ ಕೇಂದ್ರಗಳ ಸ್ಥಾಪನೆ ಮೂಲಕ ಗುರುತರವಾದ ಕಾರ್ಯವನ್ನು ಮಾಡ್ದಿದಾರೆ. ಅವರ ಈ ಸೇವೆಯನ್ನು ಗುರುತಿಸಿ ಪ್ರಸ್ತುತ ವರ್ಷ ರಾಜ್ಯ ಸಕರ್ಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ವ್ಯಾಪಕವಾದ ಜಾಗೃತಿಯನ್ನು ಮೂಡಿಸುವಲ್ಲಿ ಕೆ.ನೀಲಾ ಪ್ರಮುಖರು. ಜಿಲ್ಲೆಯ ಹತ್ತು ತಾಲ್ಲೂಕು ಮತ್ತು ಹೈಕ ಭಾಗದ ಎಲ್ಲೆಡೆ ಪ್ರಚಾರ ನಡೆಸುತ್ತ್ದಿದಾರೆ. ಬಂಡಾಯ ಸಾಹಿತ್ಯದ ಮೂಲಕ ಮಹಿಳೆಯ ಹಕ್ಕು ಹಾಗೂ ದಲಿತ ಮಹಿಳೆ ಉನ್ನತಿಗೆ ಮಲ್ಲಿಕಾ ಘಂಟಿ, ಮೀನಾಕ್ಷಿ ಬಾಳಿ, ಶಾಂತಾ ಅಷ್ಟಗಿ, ಸರಸ್ವತಿ ಚಿಮ್ಮಲಗಿ ಅವರು ಸ್ಮರಣೀಯ ಕಾರ್ಯಮಾಡ್ದಿದಾರೆ.ಅಖಿಲ ಭಾರತ ಮಹಿಳಾ ಸಂಘಟನೆಯ ಮೂಲಕ ಮಹಿಳಾ ಹೋರಾಟಕ್ಕೆ ಜೀವ ತುಂಬಿದವರು ನಾಗಮ್ಮಾಳ್, ಮಹಿಳಾ ಸಮಾನತೆಯನ್ನೇ ಪ್ರಮುಖವಾಗಿ ಪರಿಗಣಿಸ್ದಿದ 12ನೇ ಶತಮಾನದ ಶರಣರ ಆಶಯ ಆಮೇಲೆ ಅಸ್ಪಷ್ಟವಾಗಿಯೇ ಉಳಿಯಿತು.ಕಾಲನ ತುಳಿತಕ್ಕೆ ಒಳಗಾಗಿ ಮಹಿಳೆಯರೇ ಧ್ವನಿಯನ್ನು ಕಳೆದುಕೊಂಡ್ದಿದರು. ಶರಣರು ನೀಡಿದ ಮಹಿಳಾ ಸ್ವಾತಂತ್ರ್ಯವನ್ನು ಮತ್ತೆ ಜಿಲ್ಲೆಯಲ್ಲಿ ಪುನರುಜ್ಜೀವನಗೊಳಿಸಿದವರು ಶ್ರೀಮತಿ ವಿಲಾಸವತಿ ಖೂಬಾ ಅವರು. ಮಾಜಿ ಉಪರಾಷ್ಟ್ರಪತಿ ಡಾ.ಬಿ.ಡಿ.ಜತ್ತಿ ಅವರ ಮಗಳಾಗಿ, ಇಲ್ಲಿಯ ಉದ್ಯಮಿ ಖೂಬಾ ಅವರನ್ನು ವರಿಸಿದ ನಂತರ ತಮ್ಮದೇ ಆದ ಸೇವಾ ಕಾರ್ಯವನ್ನು ಮಾಡುತ್ತಾ ಬಂದ್ದಿದಾರೆ. ಉಪನ್ಯಾಸ ಕಾರ್ಯಕ್ರಮ, ಪುಸ್ತಕ ಪ್ರಕಟಣೆ ಮುಂತಾದ ಸಾಹಿತ್ಯ ಕಾರ್ಯಗಳಿಗೆ ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡುತ್ತಾರೆ.ಜಿಲ್ಲೆಯ ಹಲವಾರು ಮಹಿಳೆಯರು ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸು ನಿಟ್ಟನಲ್ಲಿ ಅಪರೋಕ್ಷವಾಗಿಯೇ ಸೇವೆ ಸಲ್ಲಿಸಿ ಸ್ತುತ್ಯಾರ್ಹವಾದ ಕಾರ್ಯ ಮಾಡಿ ಹಿಂದುಳಿದ ಭಾಗದ ಮುಂದುವರೆದ ಮಹಿಳೆಯರು ಎಂದೇ ಪ್ರಸಿದ್ಧರಾಗ್ದಿದಾರೆ.

ಪ್ರವಚನ

ದೇವರನ್ನು ವಿರೋಧಿಸಿ ಬದುಕಿದವರುಂಟೆ?

ಇದು ಸರ್ವಕಾಲದಲ್ಲೂ ಎಲ್ಲರನ್ನು ಕಾಡಿದ ಪ್ರಶ್ನೆ. ಮನುಷ್ಯ ಎಷ್ಟೇ ಪ್ರಗತಿಪರನಾದರೂ ನಾಸ್ತಿಕನಾದರೂ ಆತ ದೇವರ ಪ್ರಭಾವದಿಂದ ಹೊರಬಂದಿಲ್ಲ. `ದೇವರು' ಎಂಬ ಹೆಸರನ್ನು ಕೂಡಾ ಅವನು ನಿರಾಕರಿಸಲು ಹೆದುರುತ್ತಾನೆ.ದೇವರ ಅಸ್ತಿತ್ವ ಮತ್ತು ನಂಬಿಕೆ ಕುರಿತು ಅನೇಕ ಉದ್ಘ್ರಂಥಗಳು ಬಂದಿವೆ. ದೇವರನ್ನು ನಂಬುವ ಮೂರು ವರ್ಗದವರನ್ನು ನಾವು ಗುರುತಿಸಬಹುದು. ಬಹುದೇವೋಪಸಕರು, ಏಕದೇವೋಪಾಸಕರು, ನಾಸ್ತಿಕರೆಂದು.ಬಹುದೇವೋಪಾಸಕರು ಮಣ್ಣು, ಕಲ್ಲು, ಕಟ್ಟಿಗೆ, ಕಬ್ಬಿಣ, ಕಣಜ, ಬೆಳ್ಳಿ, ಬಂಗಾರ, ಆನೆ, ಇಲಿ, ಕುರಿ, ಕೋಳಿ, ಕೋಣ, ಆಕಳು, ರಾಕ್ಷಸಿ ಎಲ್ಲವನ್ನೂ ದೇವರೆಂದೆ ಪೂಜಿಸುತ್ತಾರೆ. ಇನ್ನು ಏಕದೇವೋಪಸಕರು ತಮಗೆ ಇಷ್ಟವಾದ, ಮಹಮ್ಮದ ಪೈಗಂಬರ, ಬುದ್ಧ, ಮಹಾವೀರ, ಏಸು, ಬಸವಣ್ಣ, ಆಂಜನೇಯ, ಶ್ರೀಹರಿ ಮುಂತಾಗಿ, ಇನ್ನೂ ನಾಸ್ತಿಕರು ಮಾನವೀಯತೆ, ಸತ್ಯ, ಪ್ರಾಮಾಣಿಕತೆ, ಪ್ರಕೃತಿ, ಸೌಂದರ್ಯವನ್ನು ದೇವರೆಂದು ಪೂಜಿಸುತ್ತಾರೆ. ಆದರೆ ಯಾರೂ ದೇವರು ಎಂಬ ಶಬ್ದವನ್ನು ನಿರಾಕರಿಸುವ ಧೈರ್ಯ ತೋರಿಲ್ಲ. ಹಾಗಾದರೆ ದೇವರೇ ಇಲ್ಲದಂತೆ ಮಾಡಿದರೆ ಹೇಗೆ ಎಂಬ ಜಿಜ್ಞಾಸೆ ಬಹುದಿನದಿಂದ ನನ್ನನ್ನು ಕಾಡ್ದಿದಿದೆ. ಅಳಕೂ ಕೂಡಾ ಆಗುತ್ತದೆ. ಪೊಲೀಸರಿಲ್ಲದ ರಾಜ್ಯದಂತೆ ಆಗುತ್ತದೆಯೇ ಎಂದು. ಅನಾಗರಿಕ ಮಾನವ ತನ್ನ ಅಭಿಲಾಷೆ, ಮನೋಲ್ಲಾಸಕ್ಕೆ ಸೀಮಿತತೆಯನ್ನು ಪಡೆದಾಗ ಈ ಎಲ್ಲ ಸಮಸ್ಯೆ ಉದ್ಭವಾಗಿವೆ. ಎಲ್ಲೆಂದರಲ್ಲಿ ತಿಂದು, ಮಲಗಿ, ಎ್ದದು ನಿರಾಳನಾಗ್ದಿದ ಆತನ ವಿಕಾಸವಾದದಿಂದ ತನ್ನ ಪ್ರದೇಶ, ಹೊಲ, ಮನೆ, ಹೆಂಡತಿ, ಮಕ್ಕಳು ಎಂದು ಗೋಜಲನ್ನು ತುಂಬಿಕೊಂಡಾಗ, ಅವರ ರಕ್ಷಣೆಗೆ ಸ್ವಾರ್ಥ, ದಾಹ, ಮೋಸ ಮುಂತಾದ ಅನಿಷ್ಟಗಳನ್ನು ಕಂಡು ಕೊಂಡ, ತನ್ನದೇ ನಡೆಯಬೇಕು ಎಂಬ ಸಮರೋತ್ಸಾಹದಲ್ಲಿ ತನಗೆ ಎದುರಾದವರನ್ನೆಲ್ಲ ನಿಣರ್ಾಮ ಮಾಡಿದ.ನಂತರ ಹೇಗಾದರೂ ಅವರನ್ನು ಅಂಕೆಯಲ್ಲಿ ಇಟ್ಟು ಕೊಳ್ಳಬೇಕು ಎಂಬ ದೂರಾಲೋಚನೆ ಮತ್ತು ದುರಾಲೋಚನೆ ಒಟ್ಟಿಗೆ ಸೇರಿಸಿ ದೇವರು ಎಂಬ ಭಯದ ಗುಮ್ಮನನ್ನು ಕಾಪಾಡುವ ಪೊಲೀಸನನ್ನು ನಿಮರ್ಿಸದನೆ ಎಂಬ ಸಂದೇಹ ಬರುತ್ತದೆ. ನಂತರ ಧರ್ಮವನ್ನು ಸ್ಥಾಪಿಸಿ ಅದಕ್ಕೆ ನೀತಿ ನಿರೂಪಕರನ್ನು ನೇಮಿಸಿ ಒಂದು ವ್ಯವಸ್ಥೆ ಎಡೆಗೆ ತಂದಂತೆ ಕಾಣುತ್ತದೆ. ತಿಳಿವಳಿಕೆ ಬಂದ ಮನುಷ್ಯ ಆ ಧರ್ಮದ ನೂನ್ಯತೆಗಳನ್ನು ಖಂಡಿಸಿದಾಗ ಸಹಜವಾಗಿ ಧರ್ಮ ಸಂಘರ್ಷ ನಡೆದಂತೆ ತೋರುತ್ತದೆ. ಇದರಿಂದ ಆರಂಭಗೊಂಡ ಮನುಷ್ಯ ಮನುಷ್ಯರ ನಡುವಿನ ಅಂತಕಲಹಃ ಆತನ ಬದುಕ ಅನ್ನು ಝರ್ಜರಿತಗೊಳಿಸಿತು ಎನ್ನಬಹುದು. ಧರ್ಮ ಯುದ್ಧದ ನಂತರ ರಾಜನ ಆಳ್ವಿಕೆ, ಆತನ ಮೇಲೆ ಈತ, ಈತನ ಮೇಲೆ ಆತ ಎಂದು ಯುದ್ಧವನ್ನು ಸಾರಿ ತನ್ನದಲ್ಲದ ಪ್ರದೇಶವನ್ನು ಆಕ್ರಮಿಸಿಕೊಂಡು ಭುವನೈಕ್ಯ ಮಲ್ಲ, ಚಕ್ರವತರ್ಿ, ತ್ರೀಲೋಕ ಒಡೆಯ, ಭುವನಪತಿ ಎನಿಸಿಕೊಳ್ಳುವುದರಲ್ಲಿ ಉತ್ಸಾಹ ತೋರಿಸ್ದಿದಾನೆ. ಕಷ್ಟದಿಂದ ಸಾಮ್ರಾಜ್ಯ ಗ್ದೆದ ಮೇಲೆ ಅಲ್ಲಿ ವೈಭವವಿರಬೇಕಲ್ಲವೇ ಎಂಬ ಮಾನವ ಸಹಜ ಆಶೆ (ದುರಾಶೆ ಎನ್ನಲೂ ಬಹುದು) ಆನೆ, ಒಂಟಿ, ಊಳಿಗ, ಬಂಗಾರ, ಸಿಂಹಾಸನ, ನೃತ್ಯ, ದಾಸ, ದಾಸಿ, ಗುಲಾಮಿ ಮುಂತಾದ ಪರಂಪರೆಗಳು ಸಹಜವಾಗಿ ಎ್ದದು ಬಂದಂತೆ ಕಾಣುತ್ತದೆ.ಇನ್ನು ರಾಜರ ಅಧಿಕಾರ ಶಾಶ್ವತವಾಗಬೇಕೆಂದರೆ, ಹೊಗಳು ಭಟ್ಟರು ಬಚಾವ್ ಅಗಬೇಕೆಂದರೆ ರಾಜಾ ಪ್ರತ್ಯಕ್ಷ ದೇವತೆ ಎಂದು ಜನರಲ್ಲಿ ಭಯ ಹುಟ್ಟಿಸಲಾಯಿತು. ನಂತರ ಆತನ ಹಿಂದಿರುವ ಗುರು ಅಥವಾ ಆಚಾರ್ಯರರನ್ನು ದೇವರು ಎನ್ನಲಾಯಿತು. ಉ್ದದೇಶ ಇಷ್ಟೆ ಅವರನ್ನು ಅವಲಂಬಿಸಿದ ಇವರು, ಇವರನ್ನು ಅವಲಂಬಿಸಿದ ಅವರು ವ್ಯವಸ್ಥಿತವಾಗಿ ತಮ್ಮ ಭೋಗವಿಲಾಸವನ್ನು ಶಾಶ್ವತವಾಗಿಸಿಕೊಂಡರು.ಜನಸಾಮಾನ್ಯ ಮಾತ್ರ ಮೇಲೆ ಹೇಳಿದಂತೆ ಎಲ್ಲ ಕಾಲದಲ್ಲೂ ಕಡೆಗಣೆನೆಗೆ ಒಳಗಾದ, ನೋವು, ಅವಮಾನ ಅನುಭವಿಸಿ ಹೇಳಿದ ಕೆಲಸವನ್ನು ಮಾಡಿಕೊಂಡು ತನ್ನ ಚೈತ್ಯಯಾತ್ರೆಯನ್ನು ಮುಗಿಸಿದ. ನಂತರ ಒಂದು ಹೊಸ ಉ್ದದೇಶದೊಂದಿಗೆ ಧರ್ಮ ಆರಂಭವಾಯಿತು ಎಂದು ಹೇಳಬಹುದು. ಧರ್ಮ ಒಳ್ಳೆಯವರಿಗಲ್ಲ. ಕೆಟ್ಟವರನ್ನು ಒಳ್ಳೆಯವರನ್ನಾಗಿ ಮಾಡುವುದೇ ಧರ್ಮದ ಆಶಯವಾಗಬೇಕು ಎಂಬ ವಿಚಾರ ಆರಂಭವಾಯಿತು. ಕಾಡು ಮನುಷ್ಯರನ್ನು, ಕಳ್ಳರನ್ನು, ದುಷ್ಟರನ್ನು, ರಾಕ್ಷಸಿ ಪ್ರವೃತ್ತಿಯವರನ್ನು ಪರಿವತರ್ಿಸಿ ಸಮಾಜದ ಮುಖ್ಯ ವಾಹಿನಿಗೆ ತಂದ ಬಗ್ಗೆ ಅಲ್ಲಲ್ಲಿ ಕಂಡು ಬರುತ್ತದೆ.ಕೊನೆಯದಾಗಿ ಎಲ್ಲ ಧರ್ಮದ ಆಶಯಗಳು ಉತ್ತಮವಾಗ್ದಿದರೂ ಅದನ್ನು ಅಥರ್ೈಸಿಕೊಳ್ಳುವುದರಲ್ಲಿ ನಾವು ಸೋತ್ದಿದೇವೆ ಎಂದೇ ಹೇಳಬಹುದು. ಆ ಧರ್ಮ, ಈ ಧರ್ಮ ಮೇಲು ಎಂದು ಎಲ್ಲರನ್ನು ಅಥವಾ ಅವರರ ಧಮರ್ೀಯರನ್ನು ಮೆಚ್ಚಿಸುವ ದೊಡ್ಡ ಭಾಷಣವನ್ನು, ಬೃಹದ್ ಗ್ರಂಥವನ್ನು ರಚನೆ ಮಾಡ್ದಿದೇವೆ. ಆದರೆ ಎಲ್ಲ ಧರ್ಮಗಳ ಸಾರ ಒಂದೆ. ಶಾಂತಿ, ಮಾನವೀಯತೆ, ಪ್ರಾಮಾಣಿಕತೆ, ಸಹಬಾಳ್ವೆ, ಒಳ್ಳೆಯ ಕಾರ್ಯಗಳಾಗಿವೆ. ಆದರೆ ಇಂದು ದೇವರು, ಧರ್ಮಗಳ ಹೆಸರಿನಲ್ಲಿ ನಡೆದ್ದಿದಾದರೂ ಏನು?

ನೆನಪಿನ ಬುತ್ತಿಯಲ್ಲಿ...

ಒಂಟಿ ಕಣ್ಣಿನ ತಿಮ್ಮನಗೌಡ

ಶಿರೂರಿನ 10.000 ಸಾವಿರ ಜನಸಂಖ್ಯೆಯಲ್ಲಿ ಗೌಡರ ಮನೆಗಳು 18 ಮಾತ್ರ. ಪ್ರತಿ ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿಲ್ಲ.ತುಂಬಾ ಮಯರ್ಾದೆಯಿಂದ ಮತ್ತು ಇತರ ಜನರೊಂದಿಗೆ ದರ್ಪ ದಬ್ಬಾಳಿಕೆಯಿಲ್ಲದ ಸಾಧು ಪ್ರಾಣಿಯಂತೆ ಈ ಊರಿನ ಗೌಡರು ಬದುಕ್ದಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಊರ ಗೌಡಕಿ (ಆಡಳಿತ) ನಡೆಸುವಲ್ಲಿ ಅಣ್ಣತಮ್ಮಂದಿರ ಮಧ್ಯೆ ಪೈಪೋಟಿ, ಜಗಳ ಸಾಮಾನ್ಯವಾಗಿತ್ತು. ವಂಶಪಾರಂಪರ್ಯವಾಗಿ ಗೌಡಕಿ ನಡೆಸುವ ಹಕ್ಕು ಪಡೆದ ಮನೆತನಗಳ ವಾರುಸುದಾರಿಕೆಯನ್ನು ಕಿತ್ತುಕೊಳ್ಳಲು ಹವಣಿಕೆ ಇ್ದದೇ ಇರುತ್ತಿತ್ತು.ಗ್ರಾಮದ ಆಡಳಿತದಲ್ಲಿ ಮುಲ್ಕಿ ಗೌಡರು (ಸಿವಿಲ್ ನ್ಯಾಯವಾದಿ ಇ್ದದಂತೆ), ಪೊಲೀಸ ಪಾಟೀಲರು (ಅಪರಾಧ ವಿಭಾಗ ನೋಡಿಕೊಳ್ಳುತ್ತ್ದಿದರು). ಮುಲ್ಕಿ ಗೌಡಕಿ ಆವಾಗ ಶಂಕರಗೌಡ ಎಂಬವರಿಗೆ ಸೇರಿತ್ತು. ಇವರ ನಂತರ ತಿಮ್ಮನಗೌಡ, ಶಿವನಗೌಡ ಆಡಳಿತ ನಡೆಸಿದರು. ತಿಮ್ಮನಗೌಡ, ಒಂಟಿ ಕಣ್ಣಿನ ತಿಮ್ಮನಗೌಡನ ಅಣ್ಣ ಸ್ದಿದನಗೌಡರ ಮಗ. ಸ್ದಿದನಗೌಡರು ಅಕಾಲ ಮರಣಕ್ಕೆ ತುತ್ತಾಗಿ ಹೋಗ್ದಿದರಿಂದ ಆವಾಗ ಅವರ ಮಗ ತಿಮ್ಮನಗೌಡ ನಾಲ್ಕು ವರ್ಷದವರ್ದಿದರು. ಇದೇ ಸಂದರ್ಭ ಸಾಧಿಸಿ ಒಂಟಿ ಕಣ್ಣಿನ ತಿಮ್ಮನಗೌಡ ಗೌಡಕಿಯನ್ನು ಅವರಿಂದ ಕಿತ್ತುಕೊಂಡನಂತೆ, ಅಲ್ಲದೆ ಸಣ್ಣ ಮಗುವನ್ನು ಕೊಲ್ಲಲು ಯೋಚನೆ ಹಾಕ್ದಿದರು ಎನ್ನಲಾಗಿದೆ. ಇದನ್ನು ತಿಳಿದುಕೊಂಡ ಆತನ ತಾಯಿ ಮಗುವನ್ನು ರಾತ್ರಿ ಬೆನ್ನಿಗೆ ಕಟ್ಟಿಕೊಂಡು ನಂಬಿಕಸ್ಥ ತಳವಾರ ಸಿಂಧೂರಪ್ಪ, ಮಜ್ಜಿಗೆ ರಾಮಣ್ಣ ಎಂಬ ಬಂಟರ ಜೊತೆ ಊರಿಗೆ ಸುಮಾರು 20 ಕಿಮಿ ದೂರದ ಕೆಲವಡಿ (ಬದಾಮಿ ತಾಲ್ಲೂಕು- ರಂಗನಾಥ ದೇವಾಲಯದಿಂದ ತುಂಬಾ ಪ್ರಸಿದ್ಧಿ) ಅಲ್ಲಿಯ ಶ್ರೀಮಂತ ಬಣಜಿಗ ಮನೆತನವರ ಮನೆಯಲ್ಲಿ ಎರಡು ದಿನ ವಾಸ ಮಾಡಿ, ನಂತರ ಮಗುವನ್ನು ಅವರ ಸುಪದರ್ಿಗೆ ಒಪ್ಪಿಸಿ ಬಂದರು. ಇತ್ತ ಮಗು ಕಾಣದೆ ಒಂಟಿ ಕಣ್ಣಿನ ತಿಮ್ಮನಗೌಡರಿಗೆ ಚಡಪಡಿಕೆ ಶುರುವಾಯಿತಂತೆ. ಎಲ್ಲರನ್ನು ವಿಚಾರಿಸಿದರು. ಮಗುವಿನ ತಾಯಿ ಬಂದ ನಂತರ ಆಕೆಗೆ ಕೇಳಿದರು. ಅದಕ್ಕೆ ಆಕೆ ಮಗುವಿಗೆ ಮೈಯಲ್ಲಿ ಹುಶಾರ್ದಿದಿಲ್ಲ. ಚಿಕಿತ್ಸೆಗೆ ಎಂದು ಹುಬ್ಬಳ್ಳಿಗೆ ಕರೆದುಕೊಂಡು ಹೋಗ್ದಿದೆ ಅಲ್ಲಿಯೇ ನಿಧನ ಹೊಂದಿತು ಎಂದು ಹೇಳಿದಳು.ಅದನ್ನು ನಂಬಿದ ಗೌಡರು, ಮುಂದೆ ನಿಶ್ಚಿಂತೆಯಿಂದ ರಾಜ್ಯಭಾರ ಮಾಡಿದರು. ಮಗುವಿಗೆ 14 ವರ್ಷ ತುಂಬುವವರೆಗೂ ಯಾರಿಗೂ ಗೊತ್ತಾಗದಂತೆ ಬೆಳೆಸಿದರು. ಅಂದಿನ ಕಲಾದಗಿಯ ಬ್ರಿಟಿಷ್ ಕಲೆಕ್ಟರ್ ಸಾಹೇಬರು ಊರಿಗೆ ಬಂದಾಗ ಅವರ ಮುಂದೆ ತನಗೆ ಆದ ಅನ್ಯಾಯವನ್ನು ತೋಡಿಕೊಂಡಳು. ಆ ಮಹಿಳೆ ಇಲ್ಲಿಯವರೆಗೆ ಅನುಭವಿಸಿದ ಕಷ್ಟವನ್ನು ಕಂಡು ಮರುಗಿದ ಬ್ರಿಟಿಷ್ ಅಧಿಕಾರಿ ಪಂಚಾಯಿತಿ ಸೇರಿಸಿ ಮತ್ತೆ ತಿಮ್ಮನಗೌಡರಿಗೆ ಗೌಡಕಿಯನ್ನು ಕೊಟ್ಟರು. ಅಲ್ಲದೆ ಮಗುವಿಗೆ ಏನಾದರೂ ಆದರೆ ನೀವೆ ಜವಾಬ್ದಾರಿ ಎಂದು ಒಂಟಿ ಕಣ್ಣಿನ ತಿಮ್ಮನಗೌಡರಿಗೆ ಹೆದರಿಸಿದರು. ಬ್ರಿಟಿಷ್ರಿಗೆ ಭಯಂಕರ ಹೆದರುತ್ತ್ದಿದ ಗೌಡರು ಮುಂದೆ ಅಕ್ಷರಶಃ ಮಗುವನ್ನು ತಮ್ಮ ಮಗನಂತೆಯೇ ಸಾಕಿದರು.ತಿಮ್ಮನಗೌಡರಿಗೆ ಇಬ್ಬರು ಹೆಂಡಂದಿರು, ಶಂಕರಗೌಡ, ಶಿವನಗೌಡ ಎಂಬ ಮಕ್ಕಳು. ಶಂಕರಗೌಡರು, ಪುನಾದಲ್ಲಿ ಎಲ್ಎಲ್ಬಿಯನ್ನು ಪಾಸು ಮಾಡಿ ಪ್ರಸಿದ್ಧ ವಕೀಲರಾಗಿ ಬಿಜಾಪುರದ ಹುಲಿ ಎಂದು ಹೆಸರು ಮಾಡಿದರು. ಒಂಟಿ ಕಣ್ಣಿನ ತಿಮ್ಮನಗೌಡರಿಗೆ ಒಬ್ಬನೇ ಮಗ ರಾಮನಗೌಡ. ಬ್ರಿಟಿಷ್ ಕಾಲದ ಪಿಎಸ್ಐ ಆಗಿ ಪ್ರಾಮಾಣಿಕ ಸೇವೆ ಸಲ್ಲಿಸಿ, ಇಲಾಖೆಯಲ್ಲಿ ಒಳ್ಳೆಯ ಹೆಸರು ಮಾಡಿ ಕೀತರ್ಿ ಶೇಷರಾದರು.

(ನಮ್ಮ ಅತ್ತೆ ದೊಡ್ಡಕ್ಕ ಹೇಳಿದ ಪ್ರಸಂಗ)

--------------

ಕೊಬ್ಬು ಇಳಿಸುತ್ತ್ದಿದ ಮ್ದದು ಮಾಸ್ತರರು

ಗ್ರಾಮೀಣ ಭಾಗದ ಶಾಲೆಯಲ್ಲಿ ಇಂಗ್ಲಿಷ್ ಕಲಿಕೆ ಎಂದರೆ ಕಬ್ಬಿಣದ ಕಡಲೆಯ್ದಿದ ಹಾಗೆ. 1ರಿಂದ 5 ನೇ ತರಗತಿಯವರೆಗೆ ಇಂಗ್ಲಿಷ್ನ ಗಂಧ ಗಾಳಿಯೇ ಗೊತ್ತಿರುತ್ತ್ದಿದಿಲ್ಲ. 5 ನೇ ವರ್ಗಕ್ಕೇ ಬಂದ ಕೂಡಲೆ ನಮ್ಮೂರಿನ ಎಲ್ಲ ಹುಡುಗರಿಗೆ ಚಳಿ ಜ್ವರ ಶುರು. ಅದಕ್ಕೆ ಕಾರಣ ಮ್ದದು ಮಾಸ್ತರರು (ಮಾಧ್ವರಾಯ) ತರಗತಿಯ ಶಿಕ್ಷಕರಾಗಿರುತ್ತ್ದಿದರು. ದಂಡಂ ದಶಗುಣಂ ಎನ್ನುವ ತತ್ವದಲ್ಲಿಯೇ ನಂಬಿಕೆ ಇಟ್ಟ್ದಿದ ಅವರು, ಕೈಯಲ್ಲಿ ತೊಗರಿಯ ನೀಟಾದ ಕಟ್ಟಿಗೆಯನ್ನು ಹಿಡಿದುಕೊಂಡರೆ ಮುಗಿದೇ ಹೋಯಿತು.ಅಂತಹ ಗುರುಗಳ ಕೈಯಲ್ಲಿ ಕಲಿತ ನಮಗೆ ಎ,ಬಿ,ಸಿ,ಡಿಯನ್ನು ತಿಳಿದುಕೊಳ್ಳಲು ಸಾಧ್ಯವಾಯಿತು ಎಂಬುದರಲ್ಲಿ ಅತೀಶಯೋಕ್ತಿ ಎನಿಸದು. ಒಂದೇ ಶಬ್ದಗಳನ್ನು ಹತ್ತು ಬಾರಿ ಬರೆಯಿಸುವುದು. ತಪ್ಪಿಲ್ಲದೆ ಕಂಠಪಾಠ ಮಾಡಿ ಹೇಳುವುದು. ಪ್ರತಿದಿನ ನೂರು ಶಬ್ದಗಳನ್ನು ಬರೆಯುವುದು ನಿತ್ಯದ ದಿನಚರಿ. ಬರೆಯದೇ ಹೋದರೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಎ್ದದು ನಿಲ್ಲಿಸುತ್ತ್ದಿದರು. ಆದರೆ ಕೆಲವು ಹಿಂದಿನ ಸಾಲಿನ ಹುಡುಗರಿಗೆ ಅವರ ಈ ದಂಡನಾ ಕ್ರಮದ ಬಗ್ಗೆ ಅಪಾರ ಅಸಮಾಧಾನ, ಕೋಪ ಇತ್ತು. ಆದರೆ ಅವರ ಎದುರಿಗೆ ಯಾರು ತೋರಿಸಿಕೊಳ್ಳುವಂತಿರಲಿಲ್ಲ. ಈಗಿನಂತೆ ಎಲ್ಲ ಶಾಲೆಗಳಲ್ಲಿ ನನ್ನ ಮಗನಿಗೆ ಹೊಡೆಯಬೇಡಿ, ಶಿಕ್ಷೆ ಕೊಡಬೇಡಿ ಎಂದು ಹೇಳುವ ತಂದೆತಾಯಿಗಳು ಇರಲಿಲ್ಲ. ಅವನ ಕಾಲು ಮುರಿದಾದರೂ ಸರಿಯೇ ಆತನಿಗೆ ವಿದ್ಯಾಭ್ಯಾಸ ಮಾಡಿಸಿ ಎಂದು ಬೇಡಿಕೊಳ್ಳುತ್ತ್ದಿದರು. ಇದರಿಂದ ಆ ಉಢಾಳ ಹುಡುಗರು ಅಸಹಾಯಕರಾಗ್ದಿದರು. ಆದರೆ ಅವರು ಕೋಪವನ್ನು ಬೇರೆ ರೀತಿ ತೋರಿಸುತ್ತ್ದಿದರು.ಪ್ರತಿದಿನ ಬೆಳಿಗ್ಗೆ ಊರ ಹೊರಗಿನ ಅರ್ಧ ಕಿಮೀ ದೂರದ ಕೆರೆಯಲ್ಲಿಯೇ ಸ್ನಾನ ಮಾಡಿ, ಮಡಿಯಿಂದ ತಾಮ್ರದ ಕೊಡದಲ್ಲಿ ನೀರು ತುಂಬಿಕೊಂಡು ತರುತ್ತ್ದಿದರು. ಆದರೆ ಅವರು ಇನ್ನೇನು ಮನೆ ಮುಟ್ಟಬೇಕು ಎನ್ನುವ ಹೊತ್ತಿಗೆ ಅವರನ್ನು ಮುಟ್ಟಿ ಓಡಿ ಹೋಗುತ್ತ್ದಿದರು. ಮೈಲಿಗೆಯಾದ ರಾಯರು `ದಡ್ಡ ರಂಡೇ ಗಂಡರು' ಎಂದು ಬೈಯ್ದುಕೊಳ್ಳುತ್ತಾ ಮತ್ತೆ ನೀರು ತುಂಬಿಕೊಂಡು ಬರುತ್ತ್ದಿದರು. ಇಂತಹ ಸಂಕಷ್ಟ ಅವರು ತಮ್ಮ ಜೀವನದಲ್ಲಿ ನೂರಾರು ಸಾರಿ ಅನುಭವಿಸಿದರೂ ಮತ್ತೆ ಶಾಲೆಗೆ ಬಂದ ನಂತರ ಆ ವಿಷಯವನ್ನೇ ಅವರು ಪ್ರಸ್ತಾಪಿಸುತ್ತಿರಲಿಲ್ಲ. ಬರೀ ಕಲಿಸುವುದನ್ನೇ ಧರ್ಮ ಎಂದು ತಿಳಿದ್ದಿದ ಅವರು ನಿವೃತ್ತಿ ಆಗುವವರೆಗೂ ನಿಷ್ಠೆಯಿಂದ ಸೇವೆ ಸಲ್ಲಿಸಿದರು. ಅಂತಹ ಗುರುಗಳನ್ನು ಜೀವನದಲ್ಲಿ ಎಂದೆಂದೂ ಮರೆಯುವ ಹಾಗೇ ಇಲ್ಲ. ಈಗ ವಯಸ್ಸಾದ ಉಢಾಳ ಹುಡುಗರಿಗೆ ಅಯ್ಯೋ ನಾವು ಅವರು ಹೇಳ್ದಿದನ್ನು ಕಲಿಯಲೇ ಇಲ್ಲ ಎಂದು ದಿನ ಬೆಳಗಾದರೆ ವಿಷಾದಿಸುತ್ತಲೇ ಇರುತ್ತಾರೆ.ಮ್ದದು ಮಾಸ್ತರರ ಬಗ್ಗೆ ಈ ಸಂದರ್ಭದಲ್ಲಿ ಸ್ವಲ್ಪ ವಯಕ್ತಿಕ ವಿಷಯವನ್ನು ಹೇಳದೆ ಹೋದರೆ ಪೂರ್ಣವಾಗಲಾರದು. ಅನೇಕ ಪ್ರತಿಷ್ಠಿತ ಬ್ರಾಹ್ಮಣ ಮನೆತನಗಳು ನನ್ನ ಊರಿನಲ್ಲಿ ಇ್ದದವು ಎಲ್ಲರಿಗೂ ಸುಮಾರು 40 ಎಕರೆಗಿಂತಲೂ ಹೆಚ್ಚಿನ ಜಮೀನು ಇತ್ತು. ಆದರೆ ಎಲ್ಲರೂ ದುಡಿಯದೇ ಗೇಣಿದಾರರ ಮೇಲೆ ಬಿಟ್ಟ್ದಿದರಿಂದ ಊಳುವವನೇ ಒಡೆಯ ಎಂಬ ಕಾಯ್ದೆಗೆ ಜಮೀನು ಕಳೆದುಕೊಂಡರು ಉಳಿದ ಕೆಲವರು ಜಾಣತನದಿಂದ ಹೊಲ ಮಾರಿ, ಬಿಜಾಪುರ, ಬಾಗಲಕೋಟ, ಧಾರವಾಡ, ಹುಬ್ಬಳ್ಳಿ, ಬೆಂಗಳೂರು ಸೇರಿದರು. ಆದರೆ ಮ್ದದು ಮಾಸ್ತರರು ಮಾತ್ರ ತಮ್ಮ 40 ಎಕರೆ ಜಮೀನು ಅನ್ನು ಸ್ವತಃ ರೈತರಂತೆ ದುಡಿದು, ನಾಲ್ಕು ಎತ್ತು, ಆಳುಗಳನ್ನು ಇರಿಸಿಕೊಂಡು, ತಮ್ಮ ಹೆಣ್ಣು ಮಕ್ಕಳನ್ನು ಕೃಷಿ ಕೆಲಸದಲ್ಲಿ ತೊಡಗಿಸಿ ಹೊಲವನ್ನು ಮಯರ್ಾದೆಯನ್ನು ಉಳಿಸಿಕೊಂಡು ಬಂದರಲ್ಲದೆ, ಇಡೀ ಸುತ್ತಲಿನ ಗ್ರಾಮಕ್ಕೆ ಭೇಷ್ ಎನಿಸಿಕೊಂಡು ಬದುಕಿದರು.

-----------

ಕಳ್ಳರಿಗೆ ಅಪರೂಪದ ಆತಿಥ್ಯ

ಸುಮಾರು 60 ವರ್ಷಗಳ ಹಿಂದಿನ ಮಾತು. ಬಾಗಲಕೋಟೆ ಜಿಲ್ಲೆಯ ಶಿರೂರು ಜಗಳತನದಲ್ಲಿ ಕುಖ್ಯಾತಿಯನ್ನು, ಶಿಕ್ಷಣ, ಸಕರ್ಾರಿ ಉದ್ಯೋಗದಲ್ಲಿ ಖ್ಯಾತಿಯನ್ನು ಗಳಿಸಿದ ಅಪರೂಪದ ಹಳ್ಳಿ. ಅಂತಹ ಹಳ್ಳಿಯಲ್ಲಿ ಅನೇಕ ಪ್ರಸಿದ್ಧವಾದ ಮಾಚಾ ಎಂಬ ಲಿಂಗಾಯತ ರಡ್ಡಿ ಜಾತಿಗೆ ಸೇರಿದ ಮನೆತನ. ಲೋಕೋಪಯೋಗಿ ಇಲಾಖೆಯಲ್ಲಿ ಆರ್.ಬಿ.ಮಾಚಾ ಅವರು ಮುಖ್ಯ ಎಂಜಿನಿಯರಾಗಿ ಕೆಲಸ ಮಾಡಿದ ಘನವಂತರು. ಆಚಾರ, ವಿನಯಶೀಲತೆ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ರಾಜನಿಂದ ಹಿಡಿದ ಜನಸಾಮಾನ್ಯನವರೆಗೂ ಪ್ರಸಿದ್ಧಿಯನ್ನು ಪಡೆದವರು.ಸಕರ್ಾರಿ ಉದ್ಯೋಗದಲ್ಲಿ ಇ್ದದುಕೊಂಡು, ಕೈ ತುಂಬಾ ಸಂಬಳ, ಅಪಾರ ಆಸ್ತಿ ಇ್ದದರೂ ಎಂದೂ ಆಡಂಬರ ಜೀವನವನ್ನು ನಡೆಸಲಿಲ್ಲ. ತಮ್ಮ ಆಸ್ತಿಯನ್ನು ಬಿಟ್ಟರೆ ಯಾವ ಆಸ್ತಿಯನ್ನು ಗಳಿಸದೆ ಸಾಯುವವರೆಗೂ ಇನ್ನೊಬ್ಬರ ಹಣಕ್ಕೆ ಕೈಚಾಚದ ವಿರಳರಲ್ಲಿ ವಿರಳರು.ಮಾಚಾ ಅವರು ಬೆಳಗಾವಿಯಲ್ಲಿ ಮುಖ್ಯ ಎಂಜಿನಿಯರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದರು. ಅವರು ಇ್ದದಷ್ಟು ದಿನ, ರಸ್ತೆ, ಸೇತುವೆ, ಸಕರ್ಾರಿ ಕಟ್ಟಡ, ಕಾಲುವೆ ಅನೇಕ ಜನಪರ ಕೆಲಸಗಳನ್ನು ಮಾಡಿಕೊಂಡು ಸೈ ಎನಿಸಿಕೊಂಡ್ದಿದರು.ಬೆಳಗಾವಿಯ ಮಹಾಂತೇಶ ನಗರ ಈಗ ಬೆಳೆದಷ್ಟು ಆಗ ಬೆಳೆದಿರಲಿಲ್ಲ. ಸಕರ್ಾರಕ್ಕೆ ಸೇರಿದ ಕೆಲವು ವಸತಿ ಗೃಹಗಳನ್ನು ಬಿಟ್ಟರೆ ಒಂದೆರಡು ಮನೆಗಳು ಮಾತ್ರ ಅಲ್ಲಿ ಇ್ದದವು. ಅಂತಹದರಲ್ಲಿ ಮನೆ ಮಾಡಿಕೊಂಡ್ದಿದ ಮಾಚಾ ಸಾಹೇಬರು (ಪ್ರೀತಿಯಿಂದ ನಮ್ಮ ಭಾಗದಲ್ಲಿ ಸಾಹೇಬರೆಂದೆ ಕರೆಯುತ್ತಾರೆ) ಮತ್ತು ಅವರ ಧರ್ಮಪತ್ನಿ ಮಾತ್ರ ವಾಸಿಸುತ್ತ್ದಿದರು. ಅವರಿಗೆ ಮಕ್ಕಳು ಇರಲಿಲ್ಲ. ಒಂದು ದಿನ ರಾತ್ರಿ ಬೆಳಗಾವಿಯಲ್ಲಿ ಅವರ್ದಿದ ಮನೆಗೆ ನಾಲ್ವರು ಕಳ್ಳರು ಹಿತ್ತಲ ಬಾಗಿಲನ್ನು ಮುರಿದು ಒಳ ನುಗ್ಗಿದರು. ಸಾಹೇಬರ ಹೆಂಡತಿಗೆ ಎಚ್ಚರವಾಗಿ ಚೀರಾಡಿದರು. ಕಳ್ಳರು ಚಾಕುವಿನಿಂದ ಸಾಹೇಬರ ಹೆಂಡತಿಯನ್ನು ಹೆದರಿಸಲು ಸಾಹೇಬರಿಗೆ ಎಚ್ಚರವಾಯಿತು. ಕಳ್ಳರಿಗೆ ಕೈ ಮುಗಿದು ದಯವಿಟ್ಟು ಗ್ದದಲ ಮಾಡಬೇಡಿ, ನಾನು ದೊಡ್ಡ ಸಾಹೇಬನಿರಬಹುದು. ಆದರೆ ನನ್ನ ಮನೆಯಲ್ಲಿ ನೀವು ಹುಡುಕಿದರೂ ಏನು ಸಿಗುವುದಿಲ್ಲ. ನನ್ನ ಹೆಂಡತಿಯ ಕೊರಳನಲ್ಲಿರುವ ತಾಳಿಯನ್ನು ಬಿಟ್ಟು ಬೇರೆನೂ ಇಲ್ಲ. ಅದನ್ನು ನಿಮಗೆ ಕೊಡುತ್ತೇವೆ. ಹಸಿದು ಬಂದ್ದಿದೀರಿ ಊಟ ಮಾಡಿಕೊಂಡು ಹೋಗಿ ಎಂದು ಹೇಳಿದರು.ಹಸಿದ್ದಿದ ಕಳ್ಳರಿಗೆ ಸಾಹೇಬರ ಮಾತು ಇಷ್ಟವಾಯಿತೋ ಏನೋ, ಆಯಿತು ನಮಗೆ ಅಡುಗೆ ಮಾಡಿ ಕೊಡಿ ಎಂದರಂತೆ. ಅದಕ್ಕೆ ಸಾಹೇಬರು ನನ್ನ ಹೆಂಡತಿಗೆ ವಯಸ್ಸಾಗಿದೆ. ಅವಳು ಚಪಾತಿ ಮಾಡುತ್ತಾಳೆ, ತಾವು ತರಕಾರಿ ಹೆಚ್ಚಿ ಸಹಾಯ ಮಾಡಿ ಎಂದರಂತೆ. ಅದಕ್ಕೆ ಸಮ್ಮತಿಸಿದ ಕಳ್ಳರು ಅಡುಗೆ ಮಾಡಲು ಶುರು ಹಚ್ಚಿಕೊಂಡರು. ಮನೆಯಲ್ಲಿ ಎಲ್ಲ ಲೈಟುಗಳು ಉರಿಯುತ್ತಿರುವುದನ್ನು ಕಂಡು ಪೊಲೀಸ ಜೀಪ್ ಬಾಗಿಲ ಬಳಿ ಬಂದು ನಿಂತು ಬಾಗಿಲು ಬಡಿದರಂತೆ. ಸಾಹೇಬರೇ, ಬಾಗಿಲು ತೆಗೆದಾಗ ಕಳ್ಳರು ಹೆದರಿಕೆಯಿಂದ ಗಡಗಡ ನಡುಗುತ್ತ್ದಿದರು. ಯಾಕೆ ಸಾಹೇಬರೇ ಇನ್ನೂ ಮಲಗಿಲ್ಲವೇ ಎಂದು ಪೊಲೀಸ್ ಅಧಿಕಾರಿ ಕೇಳಿದಾಗ, ಇಲ್ಲ ಮನೆಗೆ ಬೀಗರು ಬಂದ್ದಿದರು ಅದಕ್ಕೆ ಇವತ್ತು ತುಂಬಾ ಲೇಟಾಗಿದೆ ಎಂದು ಹೇಳಿದರಂತೆ. ಅಡುಗೆಯಾದ ಮೇಲೆ ಸಂತೃಪ್ತಭಾವದಿಂದ ಊಟ ಮಾಡಿದ ಕಳ್ಳರು. ಸಾಹೇಬರ ಕಾಲಿಗೆ ನಮಸ್ಕಾರ ಮಾಡಿ ಹೋದರಂತೆ. ಮುಂದೆ ಹಲವಾರು ವರ್ಷಗಳ ಕಾಲ ಆ ಪ್ರದೇಶದಲ್ಲಿ ಕಳ್ಳರೇ ಬರಲಿಲ್ಲವಂತೆ. ಪ್ರೀತಿ, ಮಾನವೀಯತೆಗೆ ಸಂದ ಜಯವಿದು ಎನ್ನಬಹುದು.

(ಲಿಂ.ಚೆನ್ನವೀರ ಶಿವಯೋಗಿಗಳು ವಿರಕ್ತ ಮಠ ಶಿರೂರು ಇವರು ಹೇಳಿದ ಪ್ರಸಂಗ)
-------------