Sunday, September 9, 2007

ನೆನಪಿನ ಬುತ್ತಿಯಲ್ಲಿ...

ಒಂಟಿ ಕಣ್ಣಿನ ತಿಮ್ಮನಗೌಡ

ಶಿರೂರಿನ 10.000 ಸಾವಿರ ಜನಸಂಖ್ಯೆಯಲ್ಲಿ ಗೌಡರ ಮನೆಗಳು 18 ಮಾತ್ರ. ಪ್ರತಿ ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿಲ್ಲ.ತುಂಬಾ ಮಯರ್ಾದೆಯಿಂದ ಮತ್ತು ಇತರ ಜನರೊಂದಿಗೆ ದರ್ಪ ದಬ್ಬಾಳಿಕೆಯಿಲ್ಲದ ಸಾಧು ಪ್ರಾಣಿಯಂತೆ ಈ ಊರಿನ ಗೌಡರು ಬದುಕ್ದಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಊರ ಗೌಡಕಿ (ಆಡಳಿತ) ನಡೆಸುವಲ್ಲಿ ಅಣ್ಣತಮ್ಮಂದಿರ ಮಧ್ಯೆ ಪೈಪೋಟಿ, ಜಗಳ ಸಾಮಾನ್ಯವಾಗಿತ್ತು. ವಂಶಪಾರಂಪರ್ಯವಾಗಿ ಗೌಡಕಿ ನಡೆಸುವ ಹಕ್ಕು ಪಡೆದ ಮನೆತನಗಳ ವಾರುಸುದಾರಿಕೆಯನ್ನು ಕಿತ್ತುಕೊಳ್ಳಲು ಹವಣಿಕೆ ಇ್ದದೇ ಇರುತ್ತಿತ್ತು.ಗ್ರಾಮದ ಆಡಳಿತದಲ್ಲಿ ಮುಲ್ಕಿ ಗೌಡರು (ಸಿವಿಲ್ ನ್ಯಾಯವಾದಿ ಇ್ದದಂತೆ), ಪೊಲೀಸ ಪಾಟೀಲರು (ಅಪರಾಧ ವಿಭಾಗ ನೋಡಿಕೊಳ್ಳುತ್ತ್ದಿದರು). ಮುಲ್ಕಿ ಗೌಡಕಿ ಆವಾಗ ಶಂಕರಗೌಡ ಎಂಬವರಿಗೆ ಸೇರಿತ್ತು. ಇವರ ನಂತರ ತಿಮ್ಮನಗೌಡ, ಶಿವನಗೌಡ ಆಡಳಿತ ನಡೆಸಿದರು. ತಿಮ್ಮನಗೌಡ, ಒಂಟಿ ಕಣ್ಣಿನ ತಿಮ್ಮನಗೌಡನ ಅಣ್ಣ ಸ್ದಿದನಗೌಡರ ಮಗ. ಸ್ದಿದನಗೌಡರು ಅಕಾಲ ಮರಣಕ್ಕೆ ತುತ್ತಾಗಿ ಹೋಗ್ದಿದರಿಂದ ಆವಾಗ ಅವರ ಮಗ ತಿಮ್ಮನಗೌಡ ನಾಲ್ಕು ವರ್ಷದವರ್ದಿದರು. ಇದೇ ಸಂದರ್ಭ ಸಾಧಿಸಿ ಒಂಟಿ ಕಣ್ಣಿನ ತಿಮ್ಮನಗೌಡ ಗೌಡಕಿಯನ್ನು ಅವರಿಂದ ಕಿತ್ತುಕೊಂಡನಂತೆ, ಅಲ್ಲದೆ ಸಣ್ಣ ಮಗುವನ್ನು ಕೊಲ್ಲಲು ಯೋಚನೆ ಹಾಕ್ದಿದರು ಎನ್ನಲಾಗಿದೆ. ಇದನ್ನು ತಿಳಿದುಕೊಂಡ ಆತನ ತಾಯಿ ಮಗುವನ್ನು ರಾತ್ರಿ ಬೆನ್ನಿಗೆ ಕಟ್ಟಿಕೊಂಡು ನಂಬಿಕಸ್ಥ ತಳವಾರ ಸಿಂಧೂರಪ್ಪ, ಮಜ್ಜಿಗೆ ರಾಮಣ್ಣ ಎಂಬ ಬಂಟರ ಜೊತೆ ಊರಿಗೆ ಸುಮಾರು 20 ಕಿಮಿ ದೂರದ ಕೆಲವಡಿ (ಬದಾಮಿ ತಾಲ್ಲೂಕು- ರಂಗನಾಥ ದೇವಾಲಯದಿಂದ ತುಂಬಾ ಪ್ರಸಿದ್ಧಿ) ಅಲ್ಲಿಯ ಶ್ರೀಮಂತ ಬಣಜಿಗ ಮನೆತನವರ ಮನೆಯಲ್ಲಿ ಎರಡು ದಿನ ವಾಸ ಮಾಡಿ, ನಂತರ ಮಗುವನ್ನು ಅವರ ಸುಪದರ್ಿಗೆ ಒಪ್ಪಿಸಿ ಬಂದರು. ಇತ್ತ ಮಗು ಕಾಣದೆ ಒಂಟಿ ಕಣ್ಣಿನ ತಿಮ್ಮನಗೌಡರಿಗೆ ಚಡಪಡಿಕೆ ಶುರುವಾಯಿತಂತೆ. ಎಲ್ಲರನ್ನು ವಿಚಾರಿಸಿದರು. ಮಗುವಿನ ತಾಯಿ ಬಂದ ನಂತರ ಆಕೆಗೆ ಕೇಳಿದರು. ಅದಕ್ಕೆ ಆಕೆ ಮಗುವಿಗೆ ಮೈಯಲ್ಲಿ ಹುಶಾರ್ದಿದಿಲ್ಲ. ಚಿಕಿತ್ಸೆಗೆ ಎಂದು ಹುಬ್ಬಳ್ಳಿಗೆ ಕರೆದುಕೊಂಡು ಹೋಗ್ದಿದೆ ಅಲ್ಲಿಯೇ ನಿಧನ ಹೊಂದಿತು ಎಂದು ಹೇಳಿದಳು.ಅದನ್ನು ನಂಬಿದ ಗೌಡರು, ಮುಂದೆ ನಿಶ್ಚಿಂತೆಯಿಂದ ರಾಜ್ಯಭಾರ ಮಾಡಿದರು. ಮಗುವಿಗೆ 14 ವರ್ಷ ತುಂಬುವವರೆಗೂ ಯಾರಿಗೂ ಗೊತ್ತಾಗದಂತೆ ಬೆಳೆಸಿದರು. ಅಂದಿನ ಕಲಾದಗಿಯ ಬ್ರಿಟಿಷ್ ಕಲೆಕ್ಟರ್ ಸಾಹೇಬರು ಊರಿಗೆ ಬಂದಾಗ ಅವರ ಮುಂದೆ ತನಗೆ ಆದ ಅನ್ಯಾಯವನ್ನು ತೋಡಿಕೊಂಡಳು. ಆ ಮಹಿಳೆ ಇಲ್ಲಿಯವರೆಗೆ ಅನುಭವಿಸಿದ ಕಷ್ಟವನ್ನು ಕಂಡು ಮರುಗಿದ ಬ್ರಿಟಿಷ್ ಅಧಿಕಾರಿ ಪಂಚಾಯಿತಿ ಸೇರಿಸಿ ಮತ್ತೆ ತಿಮ್ಮನಗೌಡರಿಗೆ ಗೌಡಕಿಯನ್ನು ಕೊಟ್ಟರು. ಅಲ್ಲದೆ ಮಗುವಿಗೆ ಏನಾದರೂ ಆದರೆ ನೀವೆ ಜವಾಬ್ದಾರಿ ಎಂದು ಒಂಟಿ ಕಣ್ಣಿನ ತಿಮ್ಮನಗೌಡರಿಗೆ ಹೆದರಿಸಿದರು. ಬ್ರಿಟಿಷ್ರಿಗೆ ಭಯಂಕರ ಹೆದರುತ್ತ್ದಿದ ಗೌಡರು ಮುಂದೆ ಅಕ್ಷರಶಃ ಮಗುವನ್ನು ತಮ್ಮ ಮಗನಂತೆಯೇ ಸಾಕಿದರು.ತಿಮ್ಮನಗೌಡರಿಗೆ ಇಬ್ಬರು ಹೆಂಡಂದಿರು, ಶಂಕರಗೌಡ, ಶಿವನಗೌಡ ಎಂಬ ಮಕ್ಕಳು. ಶಂಕರಗೌಡರು, ಪುನಾದಲ್ಲಿ ಎಲ್ಎಲ್ಬಿಯನ್ನು ಪಾಸು ಮಾಡಿ ಪ್ರಸಿದ್ಧ ವಕೀಲರಾಗಿ ಬಿಜಾಪುರದ ಹುಲಿ ಎಂದು ಹೆಸರು ಮಾಡಿದರು. ಒಂಟಿ ಕಣ್ಣಿನ ತಿಮ್ಮನಗೌಡರಿಗೆ ಒಬ್ಬನೇ ಮಗ ರಾಮನಗೌಡ. ಬ್ರಿಟಿಷ್ ಕಾಲದ ಪಿಎಸ್ಐ ಆಗಿ ಪ್ರಾಮಾಣಿಕ ಸೇವೆ ಸಲ್ಲಿಸಿ, ಇಲಾಖೆಯಲ್ಲಿ ಒಳ್ಳೆಯ ಹೆಸರು ಮಾಡಿ ಕೀತರ್ಿ ಶೇಷರಾದರು.

(ನಮ್ಮ ಅತ್ತೆ ದೊಡ್ಡಕ್ಕ ಹೇಳಿದ ಪ್ರಸಂಗ)

--------------

ಕೊಬ್ಬು ಇಳಿಸುತ್ತ್ದಿದ ಮ್ದದು ಮಾಸ್ತರರು

ಗ್ರಾಮೀಣ ಭಾಗದ ಶಾಲೆಯಲ್ಲಿ ಇಂಗ್ಲಿಷ್ ಕಲಿಕೆ ಎಂದರೆ ಕಬ್ಬಿಣದ ಕಡಲೆಯ್ದಿದ ಹಾಗೆ. 1ರಿಂದ 5 ನೇ ತರಗತಿಯವರೆಗೆ ಇಂಗ್ಲಿಷ್ನ ಗಂಧ ಗಾಳಿಯೇ ಗೊತ್ತಿರುತ್ತ್ದಿದಿಲ್ಲ. 5 ನೇ ವರ್ಗಕ್ಕೇ ಬಂದ ಕೂಡಲೆ ನಮ್ಮೂರಿನ ಎಲ್ಲ ಹುಡುಗರಿಗೆ ಚಳಿ ಜ್ವರ ಶುರು. ಅದಕ್ಕೆ ಕಾರಣ ಮ್ದದು ಮಾಸ್ತರರು (ಮಾಧ್ವರಾಯ) ತರಗತಿಯ ಶಿಕ್ಷಕರಾಗಿರುತ್ತ್ದಿದರು. ದಂಡಂ ದಶಗುಣಂ ಎನ್ನುವ ತತ್ವದಲ್ಲಿಯೇ ನಂಬಿಕೆ ಇಟ್ಟ್ದಿದ ಅವರು, ಕೈಯಲ್ಲಿ ತೊಗರಿಯ ನೀಟಾದ ಕಟ್ಟಿಗೆಯನ್ನು ಹಿಡಿದುಕೊಂಡರೆ ಮುಗಿದೇ ಹೋಯಿತು.ಅಂತಹ ಗುರುಗಳ ಕೈಯಲ್ಲಿ ಕಲಿತ ನಮಗೆ ಎ,ಬಿ,ಸಿ,ಡಿಯನ್ನು ತಿಳಿದುಕೊಳ್ಳಲು ಸಾಧ್ಯವಾಯಿತು ಎಂಬುದರಲ್ಲಿ ಅತೀಶಯೋಕ್ತಿ ಎನಿಸದು. ಒಂದೇ ಶಬ್ದಗಳನ್ನು ಹತ್ತು ಬಾರಿ ಬರೆಯಿಸುವುದು. ತಪ್ಪಿಲ್ಲದೆ ಕಂಠಪಾಠ ಮಾಡಿ ಹೇಳುವುದು. ಪ್ರತಿದಿನ ನೂರು ಶಬ್ದಗಳನ್ನು ಬರೆಯುವುದು ನಿತ್ಯದ ದಿನಚರಿ. ಬರೆಯದೇ ಹೋದರೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಎ್ದದು ನಿಲ್ಲಿಸುತ್ತ್ದಿದರು. ಆದರೆ ಕೆಲವು ಹಿಂದಿನ ಸಾಲಿನ ಹುಡುಗರಿಗೆ ಅವರ ಈ ದಂಡನಾ ಕ್ರಮದ ಬಗ್ಗೆ ಅಪಾರ ಅಸಮಾಧಾನ, ಕೋಪ ಇತ್ತು. ಆದರೆ ಅವರ ಎದುರಿಗೆ ಯಾರು ತೋರಿಸಿಕೊಳ್ಳುವಂತಿರಲಿಲ್ಲ. ಈಗಿನಂತೆ ಎಲ್ಲ ಶಾಲೆಗಳಲ್ಲಿ ನನ್ನ ಮಗನಿಗೆ ಹೊಡೆಯಬೇಡಿ, ಶಿಕ್ಷೆ ಕೊಡಬೇಡಿ ಎಂದು ಹೇಳುವ ತಂದೆತಾಯಿಗಳು ಇರಲಿಲ್ಲ. ಅವನ ಕಾಲು ಮುರಿದಾದರೂ ಸರಿಯೇ ಆತನಿಗೆ ವಿದ್ಯಾಭ್ಯಾಸ ಮಾಡಿಸಿ ಎಂದು ಬೇಡಿಕೊಳ್ಳುತ್ತ್ದಿದರು. ಇದರಿಂದ ಆ ಉಢಾಳ ಹುಡುಗರು ಅಸಹಾಯಕರಾಗ್ದಿದರು. ಆದರೆ ಅವರು ಕೋಪವನ್ನು ಬೇರೆ ರೀತಿ ತೋರಿಸುತ್ತ್ದಿದರು.ಪ್ರತಿದಿನ ಬೆಳಿಗ್ಗೆ ಊರ ಹೊರಗಿನ ಅರ್ಧ ಕಿಮೀ ದೂರದ ಕೆರೆಯಲ್ಲಿಯೇ ಸ್ನಾನ ಮಾಡಿ, ಮಡಿಯಿಂದ ತಾಮ್ರದ ಕೊಡದಲ್ಲಿ ನೀರು ತುಂಬಿಕೊಂಡು ತರುತ್ತ್ದಿದರು. ಆದರೆ ಅವರು ಇನ್ನೇನು ಮನೆ ಮುಟ್ಟಬೇಕು ಎನ್ನುವ ಹೊತ್ತಿಗೆ ಅವರನ್ನು ಮುಟ್ಟಿ ಓಡಿ ಹೋಗುತ್ತ್ದಿದರು. ಮೈಲಿಗೆಯಾದ ರಾಯರು `ದಡ್ಡ ರಂಡೇ ಗಂಡರು' ಎಂದು ಬೈಯ್ದುಕೊಳ್ಳುತ್ತಾ ಮತ್ತೆ ನೀರು ತುಂಬಿಕೊಂಡು ಬರುತ್ತ್ದಿದರು. ಇಂತಹ ಸಂಕಷ್ಟ ಅವರು ತಮ್ಮ ಜೀವನದಲ್ಲಿ ನೂರಾರು ಸಾರಿ ಅನುಭವಿಸಿದರೂ ಮತ್ತೆ ಶಾಲೆಗೆ ಬಂದ ನಂತರ ಆ ವಿಷಯವನ್ನೇ ಅವರು ಪ್ರಸ್ತಾಪಿಸುತ್ತಿರಲಿಲ್ಲ. ಬರೀ ಕಲಿಸುವುದನ್ನೇ ಧರ್ಮ ಎಂದು ತಿಳಿದ್ದಿದ ಅವರು ನಿವೃತ್ತಿ ಆಗುವವರೆಗೂ ನಿಷ್ಠೆಯಿಂದ ಸೇವೆ ಸಲ್ಲಿಸಿದರು. ಅಂತಹ ಗುರುಗಳನ್ನು ಜೀವನದಲ್ಲಿ ಎಂದೆಂದೂ ಮರೆಯುವ ಹಾಗೇ ಇಲ್ಲ. ಈಗ ವಯಸ್ಸಾದ ಉಢಾಳ ಹುಡುಗರಿಗೆ ಅಯ್ಯೋ ನಾವು ಅವರು ಹೇಳ್ದಿದನ್ನು ಕಲಿಯಲೇ ಇಲ್ಲ ಎಂದು ದಿನ ಬೆಳಗಾದರೆ ವಿಷಾದಿಸುತ್ತಲೇ ಇರುತ್ತಾರೆ.ಮ್ದದು ಮಾಸ್ತರರ ಬಗ್ಗೆ ಈ ಸಂದರ್ಭದಲ್ಲಿ ಸ್ವಲ್ಪ ವಯಕ್ತಿಕ ವಿಷಯವನ್ನು ಹೇಳದೆ ಹೋದರೆ ಪೂರ್ಣವಾಗಲಾರದು. ಅನೇಕ ಪ್ರತಿಷ್ಠಿತ ಬ್ರಾಹ್ಮಣ ಮನೆತನಗಳು ನನ್ನ ಊರಿನಲ್ಲಿ ಇ್ದದವು ಎಲ್ಲರಿಗೂ ಸುಮಾರು 40 ಎಕರೆಗಿಂತಲೂ ಹೆಚ್ಚಿನ ಜಮೀನು ಇತ್ತು. ಆದರೆ ಎಲ್ಲರೂ ದುಡಿಯದೇ ಗೇಣಿದಾರರ ಮೇಲೆ ಬಿಟ್ಟ್ದಿದರಿಂದ ಊಳುವವನೇ ಒಡೆಯ ಎಂಬ ಕಾಯ್ದೆಗೆ ಜಮೀನು ಕಳೆದುಕೊಂಡರು ಉಳಿದ ಕೆಲವರು ಜಾಣತನದಿಂದ ಹೊಲ ಮಾರಿ, ಬಿಜಾಪುರ, ಬಾಗಲಕೋಟ, ಧಾರವಾಡ, ಹುಬ್ಬಳ್ಳಿ, ಬೆಂಗಳೂರು ಸೇರಿದರು. ಆದರೆ ಮ್ದದು ಮಾಸ್ತರರು ಮಾತ್ರ ತಮ್ಮ 40 ಎಕರೆ ಜಮೀನು ಅನ್ನು ಸ್ವತಃ ರೈತರಂತೆ ದುಡಿದು, ನಾಲ್ಕು ಎತ್ತು, ಆಳುಗಳನ್ನು ಇರಿಸಿಕೊಂಡು, ತಮ್ಮ ಹೆಣ್ಣು ಮಕ್ಕಳನ್ನು ಕೃಷಿ ಕೆಲಸದಲ್ಲಿ ತೊಡಗಿಸಿ ಹೊಲವನ್ನು ಮಯರ್ಾದೆಯನ್ನು ಉಳಿಸಿಕೊಂಡು ಬಂದರಲ್ಲದೆ, ಇಡೀ ಸುತ್ತಲಿನ ಗ್ರಾಮಕ್ಕೆ ಭೇಷ್ ಎನಿಸಿಕೊಂಡು ಬದುಕಿದರು.

-----------

ಕಳ್ಳರಿಗೆ ಅಪರೂಪದ ಆತಿಥ್ಯ

ಸುಮಾರು 60 ವರ್ಷಗಳ ಹಿಂದಿನ ಮಾತು. ಬಾಗಲಕೋಟೆ ಜಿಲ್ಲೆಯ ಶಿರೂರು ಜಗಳತನದಲ್ಲಿ ಕುಖ್ಯಾತಿಯನ್ನು, ಶಿಕ್ಷಣ, ಸಕರ್ಾರಿ ಉದ್ಯೋಗದಲ್ಲಿ ಖ್ಯಾತಿಯನ್ನು ಗಳಿಸಿದ ಅಪರೂಪದ ಹಳ್ಳಿ. ಅಂತಹ ಹಳ್ಳಿಯಲ್ಲಿ ಅನೇಕ ಪ್ರಸಿದ್ಧವಾದ ಮಾಚಾ ಎಂಬ ಲಿಂಗಾಯತ ರಡ್ಡಿ ಜಾತಿಗೆ ಸೇರಿದ ಮನೆತನ. ಲೋಕೋಪಯೋಗಿ ಇಲಾಖೆಯಲ್ಲಿ ಆರ್.ಬಿ.ಮಾಚಾ ಅವರು ಮುಖ್ಯ ಎಂಜಿನಿಯರಾಗಿ ಕೆಲಸ ಮಾಡಿದ ಘನವಂತರು. ಆಚಾರ, ವಿನಯಶೀಲತೆ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ರಾಜನಿಂದ ಹಿಡಿದ ಜನಸಾಮಾನ್ಯನವರೆಗೂ ಪ್ರಸಿದ್ಧಿಯನ್ನು ಪಡೆದವರು.ಸಕರ್ಾರಿ ಉದ್ಯೋಗದಲ್ಲಿ ಇ್ದದುಕೊಂಡು, ಕೈ ತುಂಬಾ ಸಂಬಳ, ಅಪಾರ ಆಸ್ತಿ ಇ್ದದರೂ ಎಂದೂ ಆಡಂಬರ ಜೀವನವನ್ನು ನಡೆಸಲಿಲ್ಲ. ತಮ್ಮ ಆಸ್ತಿಯನ್ನು ಬಿಟ್ಟರೆ ಯಾವ ಆಸ್ತಿಯನ್ನು ಗಳಿಸದೆ ಸಾಯುವವರೆಗೂ ಇನ್ನೊಬ್ಬರ ಹಣಕ್ಕೆ ಕೈಚಾಚದ ವಿರಳರಲ್ಲಿ ವಿರಳರು.ಮಾಚಾ ಅವರು ಬೆಳಗಾವಿಯಲ್ಲಿ ಮುಖ್ಯ ಎಂಜಿನಿಯರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದರು. ಅವರು ಇ್ದದಷ್ಟು ದಿನ, ರಸ್ತೆ, ಸೇತುವೆ, ಸಕರ್ಾರಿ ಕಟ್ಟಡ, ಕಾಲುವೆ ಅನೇಕ ಜನಪರ ಕೆಲಸಗಳನ್ನು ಮಾಡಿಕೊಂಡು ಸೈ ಎನಿಸಿಕೊಂಡ್ದಿದರು.ಬೆಳಗಾವಿಯ ಮಹಾಂತೇಶ ನಗರ ಈಗ ಬೆಳೆದಷ್ಟು ಆಗ ಬೆಳೆದಿರಲಿಲ್ಲ. ಸಕರ್ಾರಕ್ಕೆ ಸೇರಿದ ಕೆಲವು ವಸತಿ ಗೃಹಗಳನ್ನು ಬಿಟ್ಟರೆ ಒಂದೆರಡು ಮನೆಗಳು ಮಾತ್ರ ಅಲ್ಲಿ ಇ್ದದವು. ಅಂತಹದರಲ್ಲಿ ಮನೆ ಮಾಡಿಕೊಂಡ್ದಿದ ಮಾಚಾ ಸಾಹೇಬರು (ಪ್ರೀತಿಯಿಂದ ನಮ್ಮ ಭಾಗದಲ್ಲಿ ಸಾಹೇಬರೆಂದೆ ಕರೆಯುತ್ತಾರೆ) ಮತ್ತು ಅವರ ಧರ್ಮಪತ್ನಿ ಮಾತ್ರ ವಾಸಿಸುತ್ತ್ದಿದರು. ಅವರಿಗೆ ಮಕ್ಕಳು ಇರಲಿಲ್ಲ. ಒಂದು ದಿನ ರಾತ್ರಿ ಬೆಳಗಾವಿಯಲ್ಲಿ ಅವರ್ದಿದ ಮನೆಗೆ ನಾಲ್ವರು ಕಳ್ಳರು ಹಿತ್ತಲ ಬಾಗಿಲನ್ನು ಮುರಿದು ಒಳ ನುಗ್ಗಿದರು. ಸಾಹೇಬರ ಹೆಂಡತಿಗೆ ಎಚ್ಚರವಾಗಿ ಚೀರಾಡಿದರು. ಕಳ್ಳರು ಚಾಕುವಿನಿಂದ ಸಾಹೇಬರ ಹೆಂಡತಿಯನ್ನು ಹೆದರಿಸಲು ಸಾಹೇಬರಿಗೆ ಎಚ್ಚರವಾಯಿತು. ಕಳ್ಳರಿಗೆ ಕೈ ಮುಗಿದು ದಯವಿಟ್ಟು ಗ್ದದಲ ಮಾಡಬೇಡಿ, ನಾನು ದೊಡ್ಡ ಸಾಹೇಬನಿರಬಹುದು. ಆದರೆ ನನ್ನ ಮನೆಯಲ್ಲಿ ನೀವು ಹುಡುಕಿದರೂ ಏನು ಸಿಗುವುದಿಲ್ಲ. ನನ್ನ ಹೆಂಡತಿಯ ಕೊರಳನಲ್ಲಿರುವ ತಾಳಿಯನ್ನು ಬಿಟ್ಟು ಬೇರೆನೂ ಇಲ್ಲ. ಅದನ್ನು ನಿಮಗೆ ಕೊಡುತ್ತೇವೆ. ಹಸಿದು ಬಂದ್ದಿದೀರಿ ಊಟ ಮಾಡಿಕೊಂಡು ಹೋಗಿ ಎಂದು ಹೇಳಿದರು.ಹಸಿದ್ದಿದ ಕಳ್ಳರಿಗೆ ಸಾಹೇಬರ ಮಾತು ಇಷ್ಟವಾಯಿತೋ ಏನೋ, ಆಯಿತು ನಮಗೆ ಅಡುಗೆ ಮಾಡಿ ಕೊಡಿ ಎಂದರಂತೆ. ಅದಕ್ಕೆ ಸಾಹೇಬರು ನನ್ನ ಹೆಂಡತಿಗೆ ವಯಸ್ಸಾಗಿದೆ. ಅವಳು ಚಪಾತಿ ಮಾಡುತ್ತಾಳೆ, ತಾವು ತರಕಾರಿ ಹೆಚ್ಚಿ ಸಹಾಯ ಮಾಡಿ ಎಂದರಂತೆ. ಅದಕ್ಕೆ ಸಮ್ಮತಿಸಿದ ಕಳ್ಳರು ಅಡುಗೆ ಮಾಡಲು ಶುರು ಹಚ್ಚಿಕೊಂಡರು. ಮನೆಯಲ್ಲಿ ಎಲ್ಲ ಲೈಟುಗಳು ಉರಿಯುತ್ತಿರುವುದನ್ನು ಕಂಡು ಪೊಲೀಸ ಜೀಪ್ ಬಾಗಿಲ ಬಳಿ ಬಂದು ನಿಂತು ಬಾಗಿಲು ಬಡಿದರಂತೆ. ಸಾಹೇಬರೇ, ಬಾಗಿಲು ತೆಗೆದಾಗ ಕಳ್ಳರು ಹೆದರಿಕೆಯಿಂದ ಗಡಗಡ ನಡುಗುತ್ತ್ದಿದರು. ಯಾಕೆ ಸಾಹೇಬರೇ ಇನ್ನೂ ಮಲಗಿಲ್ಲವೇ ಎಂದು ಪೊಲೀಸ್ ಅಧಿಕಾರಿ ಕೇಳಿದಾಗ, ಇಲ್ಲ ಮನೆಗೆ ಬೀಗರು ಬಂದ್ದಿದರು ಅದಕ್ಕೆ ಇವತ್ತು ತುಂಬಾ ಲೇಟಾಗಿದೆ ಎಂದು ಹೇಳಿದರಂತೆ. ಅಡುಗೆಯಾದ ಮೇಲೆ ಸಂತೃಪ್ತಭಾವದಿಂದ ಊಟ ಮಾಡಿದ ಕಳ್ಳರು. ಸಾಹೇಬರ ಕಾಲಿಗೆ ನಮಸ್ಕಾರ ಮಾಡಿ ಹೋದರಂತೆ. ಮುಂದೆ ಹಲವಾರು ವರ್ಷಗಳ ಕಾಲ ಆ ಪ್ರದೇಶದಲ್ಲಿ ಕಳ್ಳರೇ ಬರಲಿಲ್ಲವಂತೆ. ಪ್ರೀತಿ, ಮಾನವೀಯತೆಗೆ ಸಂದ ಜಯವಿದು ಎನ್ನಬಹುದು.

(ಲಿಂ.ಚೆನ್ನವೀರ ಶಿವಯೋಗಿಗಳು ವಿರಕ್ತ ಮಠ ಶಿರೂರು ಇವರು ಹೇಳಿದ ಪ್ರಸಂಗ)
-------------

2 comments:

Sidduswamy said...

ಸ್ವಾಮಿಗಳೇ
ನಿಮ್ಮ ಬ್ಲಾಗ್ ಅದ್ಭುತವಾಗಿದೆ. ಇಂಥ ಬ್ಲಾಗ್ ನಾನು ನೋಡೇ ಇಲ್ಲ..
- ವಿನೋದಕುಮಾರ
ಚಿತ್ರನಟ
ಬೆಂಗಳೂರು

Sidduswamy said...

ನಿಮ್ಮ ನೆನಪುಗಳು ಇಂದಿನ ಯುವಕರಿಗೆ ದೇದೀಪ್ಯಮಾನ.
ಹೀಗೇ ನಿಮ್ಮ ಜ್ಞಾನವನ್ನು ನಮಗೆ ಉಣಬಡಿಸಿ.
- ಮಾಲತಿ ಭಟ್
ಲಂಡನ್ (ಯುಕೆ