Sunday, September 9, 2007

ಪತ್ರಕರ್ತನಾಗಿ...

ಖಾತ್ರಿ ನೀಡದ ಉದ್ಯೋಗ ಖಾತ್ರಿ ಯೋಜನೆ

ಕೇಂದ್ರ ಸಕರ್ಾರದ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗ್ದಿದು, ಯೋಜನೆ ಅನುಷ್ಠಾನಗೊಳ್ಳುವಲ್ಲಿ ಹಲವಾರು ಅಡಚಣೆಗಳು ಎದುರಾಗಿವೆ.ಕೇಂದ್ರದ ಯುಪಿಎ ಸಕರ್ಾರದ ಮಹತ್ವಾಕಾಂಕ್ಷೆಯ ಈ ಯೋಜನೆ ಗ್ರಾಮೀಣರಿಗೆ ಉದ್ಯೋಗ ಖಾತ್ರಿ ನೀಡುತ್ತದೆಯೇ ಎಂದು ಪ್ರಶ್ನೆ ಮೂಡಿಸಿದೆ.ಕಳೆದ ಫೆಬ್ರುವರಿ ಒಂದರಿಂದ ಬೀದರ್, ಗುಲ್ಬರ್ಗ, ರಾಯಚೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ಕುಶಲತೆಯಿಲ್ಲದ ದೈಹಿಕ ಕೆಲಸ ಮಾಡಲು ಮುಂದೆ ಬರುವ ಗ್ರಾಮೀಣರಿಗೆ 100 ದಿನದ ಉದ್ಯೋಗ ನೀಡುವುದು ಇದರ ಉ್ದದೇಶ. ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನದ ಆಧಾರದ ಮೇಲೆ ಕೆಲಸ ಮಾಡಿದ ದಿನ 62.50 ರೂಪಾಯಿ ನೀಡಲಾಗುವುದು. ಉದ್ಯೋಗ ನೀಡದೆ ಇ್ದದರೆ ಶೇ. 25ರಷ್ಟು ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.ವಿವರ: ಗುಲ್ಬರ್ಗ ಜಿಲ್ಲೆಯ 337 ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆ ನಡೆಸಿ 94,974 ಜನರ ಹೆಸರನ್ನು ನೋಂದಾಯಿಸಿ ಕೊಳ್ಳಲಾಗ್ದಿದು, ಈಗಾಗಲೇ 1,73,180 ಬ್ಯಾಂಕ್ ಖಾತೆಗಳನ್ನು ತೆಗೆಯಲಾಗಿದೆ. ಸದಸ್ಯರ ಹೆಸರುಳ್ಳ ಒಟ್ಟು 70,520 ಪಾಸ್ ಬುಕ್ ಅನ್ನು ವಿತರಿಸಲಾಗ್ದಿದು, 22,932 ಅಜರ್ಿಗಳು ಬಂದಿವೆ. ಇನ್ನೂ 19,396 ಜನರಿಗೆ ಅವಕಾಶವಿದೆ. ಜಿಲ್ಲೆಯ ವಿವಿಧೆಡೆ 552 ಕಾಮಗಾರಿಗಳನ್ನು ಗುರುತಿಸಲಾಗಿದೆ.ಯಾವ ಕಾಮಗಾರಿ?: ನೂರಾರು ಕೋಟಿ ವೆಚ್ಚದಲ್ಲಿ ಕೃಷಿ ಹೊಂಡ ನಿಮರ್ಾಣ, ರಸ್ತೆ ಕಾಮಗಾರಿ, ಕೆರೆ ಹಳ್ಳಗಳು ಸ್ವಚ್ಚಗೊಳಿಸುವುದು ಸೇರಿದಂತೆ ಅನೇಕ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಕೆಲವೆಡೆ ಅದ್ಧೂರಿಯಾಗಿ ಆರಂಭವಾದರೆ, ಮತ್ತೊಂದೆಡೆ ಯೋಜನೆ ಅನುಷ್ಠಾನಕ್ಕೆ ಮೀನಮೇಷ ಎಣಿಸಲಾಗುತ್ತಿದೆ. ಗುಲ್ಬರ್ಗ ವಿಭಾಗದಲ್ಲಿ ಸತತ ಬರಗಾಲದಿಂದಾಗಿ ಕುಡಿವ ನೀರಿನ ತೀವ್ರ ತೊಂದರೆ ಉಂಟಾಗುತ್ತದೆ. ಹಾಗಾಗಿ ಈ ಯೋಜನೆ ಅಡಿಯಲ್ಲಿ ನೀರು ಸಂರಕ್ಷಣೆ, ಕೆರೆ ಹೂಳೆತ್ತುವುದು, ಅರಣ್ಯೀಕರಣಗಳಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹೇರಳವಾದ ಅವಕಾಶಗಳ್ದಿದು, ಇಂತಹ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಬರಗಾಲ ತಪ್ಪಿಸಲು ಇದೊಂದು ಒಳ್ಳೆಯ ಅವಕಾಶ ಎಂದು ಜಿಲ್ಲಾಧಿಕಾರಿ ಪಂಕಜ್ಕುಮಾರ ಪಾಂಡೆ ಹೇಳುತ್ತಾರೆ.ಯೋಜನೆ ಅನುಷ್ಠಾನಗೊಳಿಸದ ಅಧಿಕಾರಿಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಮೇಲಿಂದ ಮೇಲೆ ಎಚ್ಚರಿಕೆ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಯೋಜನೆಯಲ್ಲಿರುವ ತಾಂತ್ರಿಕ ಅಂಶಗಳ ಕುರಿತು ಕಾಮರ್ಿಕರು ವ್ಯಕ್ತಮಾಡುತ್ತಿರುವ ಅಸಮಾಧಾನ ಕಾಮಗಾರಿ ಪ್ರಗತಿಗೆ ಅಡ್ಡಿಯಾಗಿವೆ.ಜಿಲ್ಲೆಯ ಭೋಸಗಾ ಕೆರೆಯ ಹೂಳೆತ್ತುವ ಕಾರ್ಯ ಬೃಹತ್ ಕಾಮಗಾರಿ ಆಗಿದೆ. ಒಟ್ಟು 46.489 ಲಕ್ಷ ರೂಪಾಯಿ ಕಾಮಗಾರಿಗೆ ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಈ ಬೃಹತ್ ಮೊತ್ತದಲ್ಲಿ ಗಮನ ಸೆಳೆಯುವ ಕಾಮಗಾರಿ ಮಾತ್ರ ಕಂಡು ಬಂದಿಲ್ಲ.ಈ ಕೆರೆಯಲ್ಲಿನ ಹೂಳು ಅರ್ಧ ತೆಗೆದ ಮೇಲೆ ವ್ಯಾಪಕವಾದ ಮಳೆ ಸುರಿದಿದೆ. ಮತ್ತೆ ಹೂಳು ತುಂಬಿಕೊಂಡಿದೆ. ಕೆಲಸ ಮಾಡಲು ತಂದ ಬೃಹತ್ ಯಂತ್ರಗಳು ಕೆಸರಲ್ಲಿ ಸುಮ್ಮನೆ ನಿಂತಿವೆ. ಯೋಜನೆಯ ಅನುಷ್ಠಾನಕ್ಕೆ ಹಣಕಾಸಿನ ಕೊರತೆಯೇನು ಇಲ್ಲ ಎನ್ನುತ್ತಾರೆ. ಖಚರ್ು ಮಾಡಿದ ಹಣವಾದರು ಸದುಪಯೋಗವಾಗುತ್ತಿದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರು ನಿರುತ್ತರರಾಗುತ್ತಾರೆ.ಆಯ್ಕೆಯಾದ ಐದೂ ಜಿಲ್ಲೆಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಎಲ್ಲ ಕಡೆ ಅಧಿಕಾರಿಗಳು ತಯಾರಿಸಿದ ಚಂದದ ವರದಿಗಳು ಮಾತ್ರ ಈ ಹಿಂದುಳಿದ ಭಾಗದ ಭಾಗ್ಯದ ಬಾಗಿಲನ್ನೇ ತೆರೆದಿವೆ ಎನ್ನುವ ಅಭಿಪ್ರಾಯ ಮೂಡುತ್ತದೆ. ಆದರೆ ವಾಸ್ತವವಾಗಿ ಈ ಯೋಜನೆಯ ಕುರಿತು ಕೂಲಂಕುಷವಾಗಿ ನೋಡಿದರೆ ಹುಳುಕುಗಳೇ ಜಾಸ್ತಿ.ವೈಫಲ್ಯಕ್ಕೇನು ಕಾರಣ?: ಈ ಯೋಜನೆಯಡಿ ಕೆಲಸ ಮಾಡುವ ಸ್ಥಳದಲ್ಲಿ 50 ಕ್ಕಿಂತ ಹೆಚ್ಚು ಜನ ಕಾಮರ್ಿಕರ್ದಿದರೆ, ಅಲ್ಲಿ ಒಬ್ಬರು ಕಾಮರ್ಿಕರ ಮಕ್ಕಳನ್ನು ನೋಡಿಕೊಳ್ಳಬೇಕು ಎಂದು ಹೇಳುತ್ತಾರೆ. ಆದರೆ ನೋಡಿಕೊಳ್ಳುವ ಆಯಾ ಮಾತ್ರ ಎಲ್ಲಿ ಕಂಡು ಬಂದಿಲ್ಲ. ಜಿಲ್ಲೆಯ ಬಹುತೇಕ ಗ್ರಾಮಗಳ ಯುವಕರು ಉದ್ಯೋಗ ಅರಿಸಿ ಮುಂಬಯಿ, ಗೋವಾ, ಮಂಗಳೂರಿಗೆ ಹೋಗುತ್ತಾರೆ. ಮನೆಯಲ್ಲಿ ಸಣ್ಣ ಮಕ್ಕಳು 60 ವರ್ಷ ಮೇಲ್ಪಟ್ಟ ಹಿರಿಯರು ಮಾತ್ರ ಇರುತ್ತಾರೆ. ಈ ಉದ್ಯೋಗ ಖಾತ್ರಿ ನೀಡುವ 60 ರೂಪಾಯಿ ಅವರಿಗೆ ಕನಿಷ್ಠವಾದದು. ಅಲ್ಲಿ 100 ರೂಪಾಯಿಗಿಂತ ಹೆಚ್ಚು ಗಳಿಸುತ್ತಾರೆ.ಹೀಗಾಗಿ ಈ ಯೋಜನೆಯಡಿ ಕೆಲಸ ಮಾಡುವುದಕ್ಕಿಂತ ಮುಂಬೈ, ಗೋವಾಗಳಂಥ ದೊಡ್ಡ ಪಟ್ಟಣಗಳತ್ತ ಹೋಗಲು ಇಚ್ಛೆ ಪಡುತ್ತಾರೆ. ಹಾಗಾಗಿಯೇ ಇಲ್ಲಿ ಕೆಲಸಕ್ಕೆ ಬರುವ ಶೇ. 70 ರಷ್ಟು ಜನ ವಯಸ್ಸಾದವರು ಹೆಚ್ಚು ಕಾಣ ಸಿಗುತ್ತಾರೆ. ಈ ಯೋಜನೆಯಡಿ ಕೃಷಿ ಹೊಂಡ ಅಥವಾ ಪೈಪ್ಲೈನ್ ಮುಂತಾದ ಕಾಮಗಾರಿಗಳಲ್ಲಿ ದಿನಕ್ಕೆ 15 ಅಡಿ ಉ್ದದ, 3 ಅಡಿ ಅಗಲ, ಎರಡು ಅಡಿ ಆಳದ ಗುಂಡಿಯನ್ನು ತೆಗೆಯಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.ಆದರೆ ಈ ಯೋಜನೆಯಡಿ ಕೆಲಸ ಮಾಡಲು ಬರುವ ಕಾಮರ್ಿಕರು ಹೆಚ್ಚಾಗಿ ವಯಸ್ಸಾದವರಾದ ಕಾರಣ ಆ ಕಾರ್ಯವನ್ನು ಮಾಡಲು ಅಸಮರ್ಥರಾಗಿರುತ್ತಾರೆ. ಗೆರೆ ಕೊರೆದು ಇಷ್ಟೇ ಕೆಲಸ ಮಾಡಬೇಕು ಎಂದು ಕಾಮರ್ಿಕರಿಗೆ ಹೇಳಿದರೆ ಅವರು ಒಪ್ಪುವುದಿಲ್ಲ ಎನ್ನುತ್ತಾರೆ ಜಿಪಂ ಕಿರಿಯ ಎಂಜಿನಿಯರ್ ಒಬ್ಬರು. ಈಗಾಗಲೇ ಈ ಕುರಿತು ರಾಯಚೂರು ಜಿಲ್ಲೆಯಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆಯಲ್ಲದೆ, ಕಾಮಗಾರಿಯನ್ನು ಸ್ಥಗಿತಗೊಳಿಸಿದ ಉದಾಹರಣೆ ಕೂಡಾ ಇದೆ ಎನ್ನುತ್ತಾರೆ.ಅಲ್ಲದೆ ಉದ್ಯೋಗ ಖಾತ್ರಿ ಯೋಜನೆ ಅಡಿ ಹೆಸರನ್ನು ನೋಂದಾಯಿಸಿಕೊಳ್ಳಲು ಗ್ರಾಪಂ ಕಾರ್ಯದಶರ್ಿಗೆ ಹಣ ಕೊಡಬೇಕು ಎಂಬ ಆರೋಪವೂ ಇದೆ.ಈ ಎಲ್ಲ ಲೋಪ ದೋಷಗಳನ್ನು ಪರಿಹರಿಸಿ ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದಲ್ಲಿ ಯೋಜನೆ ಯಶಸ್ವಿಯಾಗುವ ಜತೆಗೆ ಈ ಭಾಗದ ಏಳಿಗೆಯೂ ಆಗುವುದರಲ್ಲಿ ಸಂಶಯವಿಲ್ಲ. ಅಧಿಕಾರಿಗಳು ಈ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಬೇಕಿದೆ.

3 comments:

Sidduswamy said...

ಬ್ಲಾಗ್ ಮಾಡುವುದು ಈಗ ಬಹಳ ಸುಲಭ. ಹಾಗೆಂದು ಯಾರಾರೋ ತಮ್ಮ ಬ್ಲಾಗ್ ಮಾಡಿಕೊಳ್ಳುತ್ತಾರೆ. ಅದರಲ್ಲಿ ಏನು ಹಾಕಬೇಕು? ಯಾವುದನ್ನು ಹಾಕಬಾರದು ಎಂಬುದನ್ನು ಗಮನಿಸುವುದೇ ಇಲ್ಲ. ಅದಕ್ಕೊಂದು ಉದಾಹರಣೆ ಸ್ವಾಮಿಗಳು ಎಂಬ ಬ್ಲಾಗ್ ನಲ್ಲಿದೆ.
ಇದರಲ್ಲಿ ಐದಾರು ವಿಭಾಗಗಳಿದ್ದು, ಏನೇನೋ ತುರುಕಲಾಗಿದೆ. ಇದರ ಉದ್ದೇಶ ಸ್ವಾಮಿಗಳು ಪ್ರಚಾರ ಪಡೆಯಬೇಕೆಂಬುದು ಅಥವಾ ಸುಮ್ಮನೇ ತಮ್ಮ ಬಾಲಿಶ ಬರಹಗಳನ್ನು ಎಲ್ಲರೂ ಓದಬೇಕು ಎಂಬುದೇ?
ಸ್ವಾಮಿಗಳು ಇನ್ನೂ ಯುವಕರಂತೆ ಕಾಣಿಸುತ್ತಾರೆ. ಆದರೆ ಈ ಬ್ಲಾಗ್ ನೋಡಿದರೆ, ಅವರಿಗೆ ಈಗಲೇ ಅರವತ್ತರ ಅರಳು- ಮರಳು ಬಂದಂತಾಗಿದೆ. ನಾನು ಈ ಬ್ಲಾಗ್ ಅನ್ನು ನೋಡಿದ್ದು ದಟ್ಸ್ ಕನ್ನಡ ಡಾಟ್ ಕಾಂ ವೆಬ್ಸೈಟ್ ನಿಂದ ಪಡೆದ ಲಿಂಕ್ ಮೂಲಕ.
ಆದ್ದರಿಂದ ಈಗಾಗಲೇ ದಟ್ಸ್ ಕನ್ನಡ ಡಾಟ್ ಕಾಂ ವೆಬ್ಸೈಟ್ ನವರಿಗೆ ಮನವಿ ಮಾಡಿದ್ದೇನೆ. ಇಂತಹ ಕಸ- ಕಡ್ಡಿ ಸೈಟುಗಳಿಗೆ ಜಾಗ ಕೊಡಬೇಡಿ ಅಂತ.

- ಮೋಹನ್ ಕೊಡಲೂರು
ಬೆಂಗಳೂರು

Sidduswamy said...

ಹೌದು. ಮೋಹನ್ ಅವರ ಅಭಿಪ್ರಾಯ ನನ್ನದೂ. ನಾನೂ ಅದನ್ನು ನೋಡಿದ್ದೇನೆ. ಮನಸ್ಸಿಗೆ ಬಂದದ್ದನ್ನು ಬರೆಯಲಾಗಿದೆ.
- ಜಾನ್ ಸ್ಮಿತ್

ಬಡಗಿ said...

Dear Sidduswamy,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends.